ಕಾಸರಗೋಡು, ಡಿ.29(DaijiworldNews/HR): ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಹಿಳಾ ಆಯೋಗದ ಅದಾಲತ್ನಲ್ಲಿ 37 ದೂರುಗಳ ಪರಿಶೀಲನೆ ನಡೆಸಲಾಗಿದ್ದು,12 ದೂರುಗಳನ್ನು ಇತ್ಯರ್ಥಗೊಳಿಸಲಾಗಿದೆ.

4 ದೂರುಗಳನ್ನು ಸಂಬಂಧಪಟ್ಟ ಇಲಾಖೆಗೆ ಕಳುಹಿಸಲಾಗಿದ್ದು, ಮುಂದಿನ ಅದಾಲತ್ನಲ್ಲಿ ಪರಿಶೀಲಿಸಲಾಗುವುದು.
ಲಾಕ್ಡೌನ್ಗಿಂತ ಹಿಂದೆ ಲಭಿಸಿದ್ದ ದೂರಗಳೇ ಪರಿಶೀಲನೆಯಲ್ಲಿ ಅಧಿಕವಾಗಿದ್ದುವು. ಲಾಕ್ಡೌನ್ ಅವಧಿಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ದೂರುಗಳ ಪ್ರಮಾಣ ಇಳಿಕೆಯಾಗಿದೆ ಎಂದು ಆಯೋಗದ ಸದಸ್ಯೆ ಷಾಹಿಮಾ ಕಮಾಲ್ ಹೇಳಿದರು.
ಲಾಕ್ಡೌನ್ ಅವಧಿಯಲ್ಲಿ ಲಭಿಸಿದ್ದ ಕೆಲವು ದೂರುಗಳನ್ನು ಆಯಾ ಪೊಲೀಸ್ ಠಾಣೆಗಳ ಹೌಸ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಸಮಸ್ಯೆ ಪರಿಹಾರಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಂಡಿರುವುದಾಗಿ ಮಹಿಳಾ ಆಯೋಗ ತಿಳಿಸಿದೆ.
ಜಿಲ್ಲಾ ಪಂಚಾಯತ್ನ ಮಾಜಿ ಸದಸ್ಯೆ ಒಬ್ಬರ ವಿರುದ್ಧ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ನಡೆಸಿದ್ದ ಸೈಬರ್ ದೌರ್ಜನ್ಯ ಸಂಬಂಧ ಲಭಿಸಿರುವ ದೂರನ್ನು ಮುಂದಿನ ಅದಾಲತ್ನಲ್ಲಿ ಪರಿಶೀಲಿಸಲಾಗಿವುದು ಗುವುದು ಎಂದು ತಿಳಿಸಿದರು.
ಅದಾಲತ್ ಸದಸ್ಯೆಯರಾದ ಇ.ಎಂ.ರಾಧಾ, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದಲ್ಲಿ ನಡೆಯಿತು.