ಉಡುಪಿ, ಡಿ. 29(DaijiworldNews/HR): ಡಿಸೆಂಬರ್ 30 ರಂದು ಬೈಂದೂರು ತಾಲೂಕಿನ ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆ ಕಾರ್ಯವು ಬೈಂದೂರು ಜೂನಿಯರ್ ಕಾಲೇಜಿನಲ್ಲಿ ನಡೆಯಲಿದೆ.

ಈ ಹಿನ್ನಲೆಯಲ್ಲಿ ಮತ ಎಣಿಕೆ ಕೇಂದ್ರದ ಬಳಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.
ಮತ ಎಣಿಕೆಯ ದಿನದಂದು ಬೈಂದೂರು ಪದವಿ ಪೂರ್ವ ಕಾಲೇಜಿನ ಎದುರುಗಡೆ ಇರುವ ರಸ್ತೆಯನ್ನು, ಮಾಸ್ತಿಕಟ್ಟೆ ಜಂಕ್ಷನ್ನಿಂದ ನಮ್ಮ ಬಜಾರ್ವರೆಗೆ ಹಾಗೂ ಸರಕಾರಿ ಆಸ್ಪತ್ರೆ ಜಂಕ್ಷನ್ನಿಂದ ಜಯಾನಂದ ಹೋಬಳಿದಾರ್ರವರ ಮನೆಯವರೆಗಿನ ರಸ್ತೆಯಲ್ಲಿ ಹಾಗೂ ಉಡುಪಿ ತಾಲೂಕಿನ ಸೈಂಟ್ ಸಿಸಿಲೀಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಬ್ರಹ್ಮಗಿರಿ ಮತ ಎಣಿಕೆ ಕೇಂದ್ರದ ಸುತ್ತಲೂ ಇರುವ ಕಾನ್ವೆಂಟ್ ರಸ್ತೆ, ಲಾಲ್ ಬಹದ್ದೂರ್ ಶಾಸ್ತ್ರಿ ರಸ್ತೆ ಹಾಗೂ ಬ್ರಹ್ಮ ಕುಮಾರೀಸ್ ರಸ್ತೆ (ಸಿಎಂಸಿ ರಸ್ತೆ)ಗಳಲ್ಲಿ ಸಂಪೂರ್ಣ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿರುತ್ತಾರೆ.