ಮಂಗಳೂರು, ಸೆ26: ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ಕೇಂದ್ರ ಸರಕಾರದ ವಿರುದ್ದ ಡಿ.ಸಿ ಕಚೇರಿ ಮುಂಬಾಗ ಮಂಗಳವಾರ ಡಿ ವೈಎಫ್ಐ ಪ್ರತಿಭಟನೆ ನಡೆಸಿತು. ಕೈಗಾಡಿಗೆ ಬೈಕ್ ಗಳನ್ನು ಕಟ್ಟಿ ಎಳೆಯುವ ಮೂಲಕ ವಿಭಿನ್ನ ಶೈಲಿಯಲ್ಲಿ ಪ್ರತಿಭಟನೆ ನಡೆಸಿದರು.ಇದೇ ವೇಳೆ ಮಾತನಾಡಿದ ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ ಇಂಮ್ತಿಯಾಜ್ ಕೇಂದ್ರ ಸರಕಾರದವೂ ಅಚ್ಚೇದಿನ್ ಹೆಸರಿನಲ್ಲಿ ದೇಶದ ಜನರನ್ನು ವಂಚಿಸುವ ಕೆಲಸ ಮಾಡುತ್ತಿದೆ. ಕೇಂದ್ರ ಸರಕಾರ ಮುಂದಾಲೋಚನೆ ಇಲ್ಲದ ಕೆಲವು ಅವೈಜ್ಞಾನಿಕ ಯೋಜನೆಗಳಿಂದ ದೇಶದ ಜನರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕಿಡಿಕಾರಿದರು. ಇದೇ ವೇಳೆ ಪ್ರತಿಭಟನೆಕಾರರು ಬೆಲೆ ಏರಿಕೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿದರು.