ಉಡುಪಿ, ಡಿ.30 (DaijiworldNews/PY): ಕೊಂಕಣ ರೈಲ್ವೆ ಹಳಿಗಳ ಅಡಿಯಲ್ಲಿ ಕುಡಿಯುವ ನೀರಿನ ಕೊಳವೆಗಳನ್ನು ಹಾಕುವ ಮೊದಲು 52 ಲಕ್ಷ ರೂ. ಠೇವಣಿ ಇಡಲು ಕೊಂಕಣ ರೈಲ್ವೆ ನಿಗಮವು ನಗರ ಸಭೆಗೆ ಸೂಚಿಸಿದೆ.

ಡಿಸೆಂಬರ್ 29 ರ ಮಂಗಳವಾರ ನಡೆದ ಪುರಸಭೆಯ ಸಾಮಾನ್ಯ ಅಧಿವೇಶನದಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆದಿದ್ದು, ನಗರದ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ವಾರಾಹಿ ನದಿ ನೀರನ್ನು ಪೂರೈಸುವ ಬಗ್ಗೆಯೂ ಅಧಿವೇಶನದಲ್ಲಿ ಚರ್ಚಿಸಲಾಯಿತು.
ನಗರದ ಮೂಲಕ ಹಾದುಹೋಗುವ ಹಳಿಗಳ ಕೆಳಗೆ ನೀರಿನ ಕೊಳವೆಗಳನ್ನು ಹಾಕುವ ಮೊದಲು ಕೊಂಕಣ ರೈಲ್ವೆ ನಿಗಮವು 52 ಲಕ್ಷ ರೂಪಾಯಿಗಳನ್ನು ಠೇವಣಿ ಇಡಲು ಕೋರಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಶಾಸಕ ರಘುಪತಿ ಭಟ್ ಅವರು ಈ ವಿಷಯದ ಬಗ್ಗೆ ನಿಗಮದೊಂದಿಗೆ ಮಾತುಕತೆ ನಡೆಸಲು ಸೂಚಿಸಿದರು. ನಂತರ, ಈ ಮೊತ್ತವನ್ನು ಕಡಿಮೆ ಮಾಡಬೇಕು ಎಂದು ನಿಗಮಕ್ಕೆ ಪತ್ರ ಬರೆಯಬೇಕು ಎನ್ನುವ ತೀರ್ಮಾನ ಕೈಗೊಳ್ಳಲಾಯಿತು.
ಎರಡು ಲಾರಿಗಳನ್ನು ರಿಪೇರಿ ಮಾಡಲು 21 ಲಕ್ಷ ರೂ ಹಾಗೂ ಇತರ ಎರಡು ಜೆಸಿಬಿಗಳ ರಿಪೇರಿಗೆ 14 ಲಕ್ಷ. ರೂ ಖರ್ಚಾಗಿದೆ ಎಂದು ತಿಳಿಸಿದ್ದು,. ಇದಕ್ಕೆ ವಿರೋಧಿಸಿದ ವಿಜಯ್ ಕೊಡವೂರು ಹಾಗೂ ಉಳಿದ ಅಧಿಕಾರಿಗಳು ವಿವರವಾದ ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ನಗರಸಭಾಧ್ಯಕ್ಷೆ ಸುಮಿತ್ರಾ ನಾಯಕ್ ಅಧ್ಯಕ್ಷತೆ ವಹಿಸಿದ್ದು, ಶಾಸಕ ಕೆ.ರಘುಪತಿ ಭಟ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಪೌರಾಯುಕ್ತ ಉದಯ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.