ಮಂಗಳೂರು, ಡಿ. 30 (DaijiworldNews/MB) : ಗ್ರಾಮ ಪಂಚಾಯತ್ ಚುನಾವಣಾ ಮತ ಎಣಿಕೆ ಹಿನ್ನೆಲೆಯಲ್ಲಿ ಬುಧವಾರ ಚುನಾವಣಾ ಮತ ಎಣಿಕಾ ಕೇಂದ್ರ 200 ಮೀಟರ್ ಸುತ್ತ ನಿಷೇಧಾಜ್ಙೆ ಜಾರಿ ಮಾಡಲಾಗಿದೆ. ಆದರೆ ಸಾರ್ವಜನಿಕರು ನಿಷೇಧಾಜ್ಞೆ ಉಲ್ಲಂಘಿಸಿದ್ದು ಪೊಲೀಸರು ಮೈಕ್ನಲ್ಲಿ ಸೂಚನೆ ನೀಡಿದ್ದಾರೆ.



ಸಾರ್ವಜನಿಕರು ನಿಷೇಧಾಜ್ಞೆ ಉಲ್ಲಂಘಿಸಿದ ಕೂಡಲೇ ಪೊಲೀಸರು ಮೈಕ್ನಲ್ಲಿ ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ.
ಕಾನೂನು ಉಲ್ಲಂಘನೆ ಮಾಡಿದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸೂಚನೆ ನೀಡಿರುವ ಪೊಲೀಸರು ಮೈಕ್ರೊಫೋನ್ ಮೈಕ್ ಮೂಲಕ ನಿಷೇಧಾಜ್ಙೆ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.