ಕಾರ್ಕಳ, ಜೂ 24: ಕುಕ್ಕುಂದೂರು ಜೋಡುರಸ್ತೆ ಜಂಕ್ಷನ್ನಲ್ಲಿ ರಸ್ತೆ ದಾಟುತ್ತಿದ್ದ ವ್ಯಕ್ತಿಯ ಸಾವಿಗೆ ಕಾರಣನಾಗಿದ್ದ ಬೊಲೋರೋ ಜೀಪೊಂದರ ಚಾಲಕನಿಗೆ ಕಾರ್ಕಳ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶ ಪುಟ್ಟರಾಜುರವರು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ಜಾರಿಗೊಳಿಸಿ ಅದೇಶ ಹೊರಡಿಸಿದ್ದಾರೆ.
2016 ಮಾರ್ಚ್ 12ರ ರಾತ್ರಿ 8 ರ ವೇಳೆಗೆ ಈ ಘಟನಾವಳಿ ನಡೆದಿದ್ದು, ರವಿ ಮೃತಪಟ್ಟಿದ್ದರು. ಜೋಡುರಸ್ತೆಯಲ್ಲಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಕೆಎ 19ಎಂ.ಎ 4345 ನೇ ನಂಬ್ರನ ಬೊಲೋರೋ ವಾಹನ ಪಾದಚಾರಿ ರವಿಗೆ ಡಿಕ್ಕಿ ಹೊಡೆದಿತ್ತು. ಗಂಭೀರ ಗಾಯಗೊಂಡಿದ್ದ ಗಾಯಾಳುವನ್ನು ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗಿದೇ ಅದೇ ದಿನ ರಾತ್ರಿ 11.25ಕ್ಕೆ ಅವರು ಮೃತಪಟ್ಟಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಪೊಲೀಸ್ ವೃತ್ತನಿರೀಕ್ಷಕ ಜಿ.ಎಂ.ನಾಯ್ಕರ್ ತನಿಖೆ ನಡೆಸಿ ಆರೋಪಿಯ ವಿರುದ್ಧ ಕಲಂ 279, 304(ಎ) ರೀತ್ಯಾ ಶಿಕ್ಷಿಸಲ್ಪಡುವ ಅಪರಾಧಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಧೀಶ ಪುಟ್ಟರಾಜುರವರು ಪ್ರಕರಣದ ವಿಚಾರಣೆ ನಡೆಸಿದ್ದು, ಅಪರಾಧವು ಸಾಭೀತು ಆಗಿರುವ ಹಿನ್ನಲ್ಲೆಯಲ್ಲಿ ಆರೋಪಿಯಾಗಿರುವ ಕಾಬೆಟ್ಟು ನಿವಾಸಿಯಾಗಿರುವ ಮಹೇಶ್.ಎನ್ ನಿಗೆ ಕಲಂ 279 ಭಾರತೀಯ ದಂಡ ಸಂಹಿತೆ ಅಡಿಯ ಪರಾಧಕ್ಕೆ ಸಂಬಂಧಿಸಿ ಕ್ರಮವಾಗಿ 6 ತಿಂಗಳ ಕಾಲ ಸಾದಾ ಕಾರಗೃಹ ವಾಸ ಮತ್ತು ರೂ. 1000 ದಂಡವನ್ನು ಮತ್ತು ಕಲಂ 304(ಎ) ಭಾರತೀಯ ದಂಡ ಸಂಹಿತೆ ಅಡಿಯ ಅಪರಾಧಕ್ಕೆ ಸಂಬಂಧಿಸಿದ ಕ್ರಮವಾಗಿ 1 ವರ್ಷ ಅವಧಿಯ ಸಾದಾ ಕಾರಗೃಹ ವಾಸ ಮತ್ತು ರೂ. 3000 ದಂಡವನ್ನು ವಿಧಿಸಿ ತೀಪು ನೀಡಿದ್ದಾರೆ. ದಂಡ ತೆರಲು ತಪ್ಪಿದಲ್ಲಿ ಕ್ರಮವಾಗಿ 2 ಮತ್ತು 3 ತಿಂಗಳ ಸಾದಾ ಕಾರಾಗೃಹ ವಾಸದ ಶಿಕ್ಷೆಯಲ್ಲಿ ಹೆಚ್ಚುವರಿಯಾಗಿ ಅನುಭವಿಸುವಂತೆ ಅದೇಶ ನೀಡಿರುತ್ತಾರೆ.
ಸರಕಾರ ಪರ ಸಹಾಯಕ ಸರಕಾರಿ ಅಭಿಯೋಜಕರಾಗಿರುವ ಶೋಭಾ ಮಹಾದೇವ ನಾಯ್ಕ ಪ್ರಕರಣದ ಸಾಕ್ಷಿದಾರರ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು