ಮಂಗಳೂರು, ಡಿ.30 (DaijiworldNews/PY): ಮಂಗಳೂರು ವಿಮಾನ ನಿಲ್ದಾಣದಲ್ಲಿ ಶನಿವಾರ ಮಧ್ಯರಾತ್ರಿ ನಿಗೂಢ ವಸ್ತುವೊಂದು ಆಕಾಶ ಮಾರ್ಗವಾಗಿ ಹಾರಿ ಅಲ್ಲಿನ ಹಳೆ ರನ್ ವೇ ಸಮೀಪ ಬಿದ್ದಿದ್ದು, ಇದರಲ್ಲಿ ವಿಮಾನ ನಿಲ್ದಾಣ ಸಿಬ್ಬಂದಿಗಳೇ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.

ವಿಮಾನ ನಿಲ್ದಾಣದ ಆವರಣದ ಸುತ್ತಮುತ್ತ ಬೃಹತ್ ಗಾತ್ರದ ಕಂಪೌಡ್ ಹಾಲ್, ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಈ ಪ್ರದೇಶವು ಛಾಯಾಗ್ರಹಣ ವಿಡಿಯೋ, ಹಾರಾಟ ನಿಷೇಧಿತ ಪ್ರದೇಶವಾಗಿದ್ದರೂ ಕೂಡಾ ಆಟಿಕೆ ಹೆಲಿಕಾಫ್ಟರ್ವೊಂದು ವಿಮಾನ ನಿಲ್ದಾಣದ ಹಳೇ ರನ್ವೃ ಪ್ರವೇಶ ಮಾಡಿರುವುದು ಅನುಮಾನಕ್ಕೆ ಕಾರಣವಾಗಿದೆ.
ಸಿಐಎಸ್ಎಫ್ ತಪಾಸಣೆಯ ಪ್ರಕಾರ, ಇದು ಸಾಮಾನ್ಯವಾದ ಆಟಿಕೆಯಲ್ಲ. ಆದರೆ, ಇದನ್ನು ಸುಧಾರಿತ ತಂತ್ರಜ್ಞಾನದಿಂದ ಮಾಡಲಾಗಿದೆ. ಆದ್ದರಿಂದ ವಿಮಾನ ನಿಲ್ದಾಣದೊಳಗಿನಿಂದ ಸಿಬ್ಬಂದಿ ಅಥವಾ ಬೇರೆ ಯಾರೋ ಹಾರಾಟ ಮಾಡಿರುವ ಸಾಧ್ಯತೆ ಇದೆ ಎಂಬುದು ದಟ್ಟವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಆಟಿಕೆ ಪತ್ತೆಯಾದ ಸ್ಥಳದಲ್ಲಿ ಸರಿಯಾದ ಬೆಳಕು ಇಲ್ಲದಿರುವ ಕಾರಣ ವಿಮಾನ ನಿಲ್ದಾಣ ವಲಯದ ಸುತ್ತಲೂ ಬೆಳಕು ಹಾಗೂ ಸಿಸಿ ಕ್ಯಾಮೆರಾ ಅಳವಡಿಕೆ ಮಾಡುವಂತೆ ನಗರ ಪೊಲೀಸರು ಸೂಚಿಸಿದ್ದಾರೆ. ಇದರಿಂದಾಗಿ ನಿಲ್ದಾಣದ ಹೊರ ಭಾಗದಿಂದ ಯಾರಾದರೂ ವಸ್ತುಗಳನ್ನು ಎಸೆದರೆ, ದಾಳಿ, ಆಟಿಕೆ ವಸ್ತುಗಳನ್ನು ಹಾರಿಬಿಟ್ಟರೆ ಪತ್ತೆ ಮಾಡಲು ಅನುವು ಮಾಡಿಕೊಡಲಿದೆ ಎನ್ನುವುದು ಪೊಲೀಸರ ಅಭಿಪ್ರಾಯವಾಗಿದೆ. ವಿಮಾನ ನಿಲ್ದಾಣದಲ್ಲಿ ಸುಧಾರಿತ ಗಸ್ತು ವ್ಯವಸ್ಥೆ ಮಾಡುವಂತೆ ಕೂಡಾ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.