ಉಡುಪಿ, ಡಿ.30 (DaijiworldNews/PY): ಹಾರಾಡಿ ಗ್ರಾಮ ಪಂಚಾಯತ್ನ ಬೈಕಾಡಿ ಗ್ರಾಮದಲ್ಲಿ 8ರಲ್ಲಿ 8 ಸ್ಥಾನಗಳನ್ನು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ.

ಕಳೆದ ಬಾರಿ ಕಾಂಗ್ರೆಸ್ ಬೆಂಬಲದಿಂದ ಗೆದ್ದು ಗ್ರಾಮ ಪಂಚಾಯತ್ನ ಅಧ್ಯಕ್ಷೆಯಾಗಿ ಕೊನೆ ಕ್ಷಣದಲ್ಲಿ ಬಿಜೆಪಿಗೆ ಪಕ್ಷಾಂತರ ಮಾಡಿದ ಹಾರಾಡಿ ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷೆ ಈ ಬಾರಿ ಗ್ರಾ.ಪಂ.ಚುನಾವಣೆಯಲ್ಲಿ ಹೀನಾಯ ಸೋಲನುಭವಿಸಿದ್ದಾರೆ.
ಕಳೆದ ಬಾರಿ ಬಿಜೆಪಿ ಬೆಂಬಲದಿಂದ ಗೆದ್ದ ಅಭ್ಯರ್ಥಿಗಳು ಈ ಬಾರಿಯೂ ಸ್ಪರ್ಧಿಸಿದ್ದು, ಅವರೂ ಕೂಡಾ ಸೋಲನುಭವಿಸಿದ್ದು, ಓರ್ವ ಬಿಜೆಪಿ ಬೆಂಬಲಿತ ಅಭ್ಯರ್ಥಿ 3ನೇ ಸ್ಥಾನದಲ್ಲಿದ್ದಾರೆ.