ಬಂಟ್ವಾಳ, ಡಿ.30 (DaijiworldNews/PY): ಪಂಜಿಕಲ್ಲು ಎಲ್ಲಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಒಟ್ಟು 16 ಕ್ಷೇತ್ರದಲ್ಲಿ 16 ಸ್ಥಾನಗಳು ಬಿಜೆಪಿ ತೆಕ್ಕೆಗೆ ಹೋಗಿದೆ.

ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಶಶಿಕಲ ಕೇಶವ, ಬಾಲಕೃಷ್ಣ ಪೂಜಾರಿ, ನಳಿನಿ ಪ್ರಸಾದ್, ಮೋಹನ್ ದಾಸ್, ಹರೀಶ್ ಪೂಜಾರಿ, ಲಕ್ಮೀನಾರಾಯಣ ಗೌಡ, ವಿಕೇಶ, ಜಯಶ್ರೀ, ಶೋಭಾ, ಚಂದ್ರಾವತಿ, ಸುಜಾತ, ಸಂಜೀವ ಪೂಜಾರಿ, ಚಿತ್ರಾಕ್ಷಿ, ಪೂವಪ್ಪ ಮೆಂಡನ್, ಗೋಪಾಲ ಕುಲಾಲ್, ರೂಪಶ್ರೀ ಅವರು ಆಯ್ಕೆಯಾಗಿದ್ದಾರೆ.
ಅಳಿಕೆ ಗ್ರಾಮ ಪಂಚಾಯತ್ನಲ್ಲಿ ಒಟ್ಟು 15 ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಈ ಪೈಕಿ 10 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹಾಗೂ 5 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಪದ್ಮನಾಭ ಪೂಜಾರಿ ಸಣ್ಣಗುತ್ತ, ಸದಾಶಿವ ಶೆಟ್ಟಿ ಅಳಿಕೆ, ಸೀತಾರಾಮ ಶೆಟ್ಟಿ ಮುಳಿಯ, ರವೀಶ್ ಕೆ., ಜಗದೀಶ್ ಶೆಟ್ಟಿ ಮುಳಿಯ ಗುತ್ತು, ಸರಸ್ವತಿ ಚೆಂಡುಕ್ಕಳ, ಬಬಿತಾ ನಾರಾಯಣ ಜೆಡ್ಡು, ಸೆಲ್ವಿನ್ ಡಿಸೋಜಾ ನೆಕ್ಕಿತ ಪುಣಿ, ಸರೋಜಿನಿ ಕೇಕನಾಜ, ಶಾಂಬವಿ ಸುಧಾಕರ ಮಡಿಯಾಳ ಆಯ್ಕೆಯಾಗಿದ್ದಾರೆ. ಬಿಜೆಪಿ ಬೆಂಬಲಿತ ಕಾನ ಈಶ್ವರ ಭಟ್, ಶಶಿಕಲ ಆನೆಪದವು, ಸುಕುಮಾರ ಮುಳಿಯ, ಗಿರಿಜ ಬಿಟ್ಟಿಮೂಲೆ, ಭಾಗಿರತಿ ಆಯ್ಕೆಯಾಗಿದ್ದಾರೆ.
ವೀರಕಂಭ ಗ್ರಾಮ ಪಂಚಾಯತ್ನಲ್ಲೂ ಸಮಬಲದ ಪ್ರದರ್ಶನವಾಗಿದ್ದು, ಒಟ್ಟು 14 ಸ್ಥಾನಗಳ ಪೈಕಿ ಕಾಂಗ್ರೆಸ್ ಹಾಗೂ ಬಿಜೆಪಿ ಸಮಬಲ ಸಾಧಿಸಿದೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಸಂದೀಪ್ ಪೂಜಾರಿ, ಜಯಪ್ರಸಾದ್ ಶೆಟ್ಟಿ, ದಿನೇಶ್ ಪೂಜಾರಿ, ಮೀನಾಕ್ಷಿ , ಜಯಂತಿ ಪೂಜಾರಿ, ಲಕ್ಮೀ, ಉಮಾವತಿ ದಾಮೋದರ ಸಪಲ್ಯ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ರಘು ಪೂಜಾರಿ, ನಿಶಾಂತ್ ರೈ, ಜನಾರ್ದನ ಬಾಯಿಲ, ಗೀತಾ, ಅಬ್ದುಲ್ ರಹಮಾನ್ ಎಸ್, ಲಲಿತ ವಿಜಯ ಹಾಗೂ ಶೀಲಾನಿರ್ಮಲ ವೇಗಸ್ ಸಾಧಿಸಿದ್ದಾರೆ.