ಉಡುಪಿ, ಡಿ. 31 (DaijiworldNews/MB) : ಬುಧವಾರ ಬೆಳಗ್ಗೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಎರಡು ಮಿನಿ ಟಿಪ್ಪರ್ ಸೇರಿದಂತೆ ಒಟ್ಟು ಐದು ಟಿಪ್ಪರ್ಗಳನ್ನು ಗಣಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಸಂಬಂಧ ಪಟ್ಟ ಪೋಲಿಸ್ ಠಾಣೆಗೆ ಹಸ್ತಾಂತರಿಸಲಾಗಿದೆ.








ಬುಧವಾರ ಬೆಳಿಗ್ಗೆಯೇ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆಗಿಳಿದ ಗಣಿ ಅಧಿಕಾರಿಗಳಾದ ಸಂದೀಪ್ ಪಾಟೀಲ್ ಹಾಗೂ ಮಹೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಮಣಿಪಾಲ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಪೆರಂಪಳ್ಳಿ ಗ್ರಾಮದ ಜಂಕ್ಷನ್ನಲ್ಲಿ ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಎರಡು ಮಿನಿ ಟಿಪ್ಪರ್ನ್ನು ಗಣಿ ಇಲಾಖೆಯು ದಾಳಿ ನಡೆಸಿ ತಲಾ ಆರು ಟನ್ಸ್ ಅಷ್ಟು ಮರಳನ್ನು ವಶಪಡಿಸಿಕೊಂಡು ಮಣಿಪಾಲ ಠಾಣೆ ಗೆ ಒಪ್ಪಿಸಿದೆ.
ಇನ್ನು ತಲಾ 10 ಟನ್ಸ್ ಆಕ್ರಮ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ನ್ನು ಪುತ್ತೂರು ರಾಷ್ಟ್ರೀಯ ಹೆದ್ದಾರಿ 66 ಬಳಿ ವಶಪಡಿಸಿಕೊಂಡು ಉಡುಪಿ ನಗರ ಠಾಣೆ ಗೆ ಹಸ್ತಾಂತರಿಸಿ ಕೇಸು ದಾಖಲು ಮಾಡಿದೆ ಎಂದು ಗಣಿ ಇಲಾಖೆಯ ಅಧಿಕಾರಿ ಮಹೇಶ್ ದಾಯ್ಜಿವರ್ಲ್ಡ್ ಗೆ ತಿಳಿಸಿದ್ದಾರೆ.