ಕಡಬ, ಡಿ. 31 (DaijiworldNews/MB) : ಕಡಬ ತಾಲೂಕಿನ ಒಟ್ಟು 21 ಗ್ರಾಮ ಪಂಚಾಯತ್ನಲ್ಲಿ ೧೮ ಪಂಚಾಯತ್ನಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದೆ. ಕಾಂಗ್ರೆಸ್ ಕೇವಲ ಮೂರು ಪಂಚಾಯತ್ಗಳಲ್ಲಿ ಗೆಲುವು ಸಾಧಿಸಿದೆ.

ಇಂದು ಬೆಳಿಗ್ಗೆ ಕೌಕ್ರಾಡಿ ಗ್ರಾ.ಪಂ. ಫಲಿತಾಂಶ ಪ್ರಕಟವಾಗಿದ್ದು ಕೌಕ್ರಾಡಿ ಗ್ರಾಮ ಪಂಚಾಯತ್ ಬಿಜೆಪಿ ಬೆಂಬಲಿತರ ತೆಕ್ಕೆಗೆ ಸೇರಿದೆ. ಕೊಣಾಜೆ ಗ್ರಾಮ ಪಂಚಾಯತ್ ಕೂಡಾ ಬಿಜೆಪಿ ಬೆಂಬಲಿತರ ತೆಕ್ಕೆಗೆ ಸೇರಿದೆ. 3 ಸ್ಥಾನ ಬಿಜೆಪಿ ಬೆಂಬಲಿತರು, ಕಾಂಗ್ರೆಸ್ ಬೆಂಬಲಿತ ಓರ್ವ ಅಭ್ಯರ್ಥಿ ಹಾಗೂ ಓರ್ವ ಪಕ್ಷೇತರ ಅಭ್ಯರ್ಥಿಗೆ ಗೆದ್ದಿದ್ದಾರೆ.
ಮರ್ಧಾಳ ಗ್ರಾಮ ಪಂಚಾಯತ್ನಲ್ಲಿ 6 ಬಿಜೆಪಿ ಬೆಂಬಲಿತರು, 3 ಕಾಂಗ್ರೆಸ್ ಬೆಂಬಲಿತರು ಜಯ ಗಳಿಸಿದ್ದಾರೆ.
ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ನಲ್ಲಿ 12 ಸ್ಥಾನ ಬಿಜೆಪಿ ಬೆಂಬಲಿತರಿಗೆ, ಐದು ಸ್ಥಾನಗಳು ಕಾಂಗ್ರೆಸ್ ಬೆಂಬಲಿತರ ಪಾಲಾಗಿದೆ.
ಶಿರಾಡಿ ಪಂಚಾಯತ್ ಕಾಂಗ್ರೆಸ್ ಬೆಂಬಲಿತರ ಕೈ ಸೇರಿದೆ. 6 ಕಾಂಗ್ರೆಸ್ ಬೆಂಬಲಿತರು, ಇಬ್ಬರು ಬಿಜೆಪಿ ಬೆಂಬಲಿತರಿಗೆ ಗೆಲುವು ಲಭಿಸಿದೆ.
ಆಲಂಕಾರು ಪಂಚಾಯತ್ನಲ್ಲಿ ಬಿಜೆಪಿ ಬೆಂಬಲಿತರ ಪಾಲಾಗಿದ್ದು 11 ಸ್ಥಾನಗಳ ಪೈಕಿ ಎಲ್ಲಾ ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ರಣಭೇರಿ ಬೀಸುವ ಮೂಲಕ ಕ್ಲೀನ್ ಸ್ವೀಪ್ ಮಾಡಿದ್ದಾರೆ.
ಕೊಂಬಾರು ಪಂಚಾಯತ್ನ ಅಧಿಕಾರ ಬಿಜೆಪಿ ಬೆಂಬಲಿತರಿಗೆ ದಕ್ಕಿದೆ. ಪಂಚಾಯತ್ನ ಒಂಬತ್ತು ಸ್ಥಾನಗಳನ್ನು ಕೂಡಾ ಬಿಜೆಪಿ ಬೆಂಬಲಿತರು ಬಾಚಿಕೊಂಡಿದ್ದಾರೆ.
ಕುಕ್ಕೇ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ನಲ್ಲಿ ಬಿಜೆಪಿ ಪಾರಮ್ಯ ಸಾಧಿಸಿದೆ. 18 ಸ್ಥಾನಗಳು ಬಿಜೆಪಿ ಬೆಂಬಲಿತರ ತೆಕ್ಕೆಗೆ ಸೇರಿದ್ದು, ಕಾಂಗ್ರೆಸ್ ಬೆಂಬಲಿತ ಇಬ್ಬರಿಗೆ ಹಾಗೂ ಓರ್ವ ಸ್ವತಂತ್ರ ಅಭ್ಯರ್ಥಿಗೆ ಗೆಲುವು ಸಾಧಿಸಿದ್ದಾರೆ.
ಬೆಳಂದೂರಿನಲ್ಲಿ ಪಂಚಾಯತ್ ಅಧಿಕಾರ ಬಿಜೆಪಿ ಬೆಂಬಲಿತರ ವಶಕ್ಕೆ ಸೇರಿದೆ. 10 ಮಂದಿ ಬಿಜೆಪಿ ಬೆಂಬಲಿತರಿಗೆ ಹಾಗೂ ಕಾಂಗ್ರೆಸ್ ಬೆಂಬಲಿತ ಐವರಿಗೆ ಗೆಲುವು ಲಭಿಸಿದೆ.
ರಾಮಕುಂಜ ಪಂಚಾಯತ್ ನಲ್ಲಿ ಬಿಜೆಪಿ ಬೆಂಬಲಿತರು ಗೆಲುವು ಪಡೆದಿದ್ದಾರೆ. 13 ಮಂದಿ ಬಿಜೆಪಿ ಬೆಂಬಲಿತರು, ಇಬ್ಬರು ಕಾಂಗ್ರೆಸ್ ಬೆಂಬಲಿತರು ಹಾಗೂ ಒಬ್ಬರು ಎಸ್ಡಿಪಿಐ ಬೆಂಬಲಿತರು ಜಯಗಳಿಸಿದ್ದಾರೆ.
ಕಾಣಿಯೂರು ಪಂಚಾಯತ್ನ ಅಧಿಕಾರ ಬಿಜೆಪಿ ಬೆಂಬಲಿತರ ತೆಕ್ಕೆಗೆ ಸೇರಿದೆ. 16 ಸ್ಥಾನಗಳ ಪೈಕಿ 15 ಸ್ಥಾನಗಳನ್ನು ಬಿಜೆಪಿ ಬೆಂಬಲಿಗರು ಬಾಚಿದ್ದಾರೆ.
ಬಳ್ಪ ಪಂಚಾಯತ್ನಲ್ಲಿ ಆರು ಮಂದಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹಾಗೂ ಕಾಂಗ್ರೆಸ್ ಬೆಂಬಲಿತ ಐವರು ಗೆಲುವು ಸಾಧಿಸಿದ್ದಾರೆ.
ನೂಜಿಬಾಳ್ತಿಲ ಪಂಚಾಯತ್ನಲ್ಲಿ 10 ಮಂದಿ ಬಿಜೆಪಿ ಬೆಂಬಲಿತರು ಹಾಗೂ ಮೂವರು ಕಾಂಗ್ರೆಸ್ ಬೆಂಬಲಿಗರು ಗೆಲ್ಲುವ ಮೂಲಕ ಪಂಚಾಯತ್ ಅಧಿಕಾರ ಬಿಜೆಪಿ ಬೆಂಬಲಿತರ ಪಾಲಾಗಿದೆ.
ಪೆರಾಬೆ ಪಂಚಾಯತ್ನಲ್ಲಿ ಬಿಜೆಪಿ ಬೆಂಬಲಿತ 9 ಮಂದಿಗೆ, ಕಾಂಗ್ರೆಸ್ ಬೆಂಬಲಿತ ನಾಲ್ವರಿಗೆ, ಇಬ್ಬರು ಸ್ವತಂತ್ರ ಅಭ್ಯರ್ಥಿಗಳಿಗೆ ಜಯ ಲಭಿಸಿದೆ.
ಕೊಯಿಲ ಪಂಚಾಯತ್ನಲ್ಲಿ ಬಿಜೆಪಿ ಬೆಂಬಲಿ 10 ಅಭ್ಯರ್ಥಿಗಳು, ಕಾಂಗ್ರೆಸ್ ಬೆಂಬಲಿತ ಮೂವರು, ಎಸ್ಡಿಪಿಐ ಬೆಂಬಲಿತ ಇಬ್ಬರಿಗೆ ಜಯ ಗಳಿಸಿದೆ.
ಕಡಬದ ಎಡಮಂಗಲ ಪಂಚಾಯತ್ನಲ್ಲಿ 13 ಮಂದಿ ಬಿಜೆಪಿ ಬೆಂಬಲಿತರು, ಕಾಂಗ್ರೆಸ್ ಬೆಂಬಲಿತ ಓರ್ವ ಅಭ್ಯರ್ಥಿ ಗೆದ್ದಿದ್ದಾರೆ.
ನೆಲ್ಯಾಡಿ ಪಂಚಾಯತ್ ಕಾಂಗ್ರೆಸ್ ಬೆಂಬಲಿತರ ತೆಕ್ಕೆಗೆ ಸೇರಿದೆ. ಎಲ್ಲಾ 8 ಸ್ಥಾನವು ಕೂಡಾ ಕಾಂಗ್ರೆಸ್ ಬಾಚಿಕೊಂಡಿದೆ.
ಐತ್ತೂರು ಗ್ರಾಮ ಪಂಚಾಯತ್ನಲ್ಲಿ ಆರು ಮಂದಿ ಬಿಜೆಪಿ ಬೆಂಬಲಿತರು, ನಾಲ್ವರು ಕಾಂಗ್ರೆಸ್ ಬೆಂಬಲಿತರು ಗೆಲುವು ಸಾಧಿಸಿದ್ದಾರೆ.
ಸವಣೂರು ಪಂಚಾಯತ್ನಲ್ಲಿ ಬಿಜೆಪಿ ಬೆಂಬಲಿತರು 16 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಎಸ್ಡಿಪಿಐ ಐದು ಸೀಟುಗಳನ್ನು ತನ್ನದಾಗಿಸಿಕೊಂಡಿದೆ. ಕಾಂಗ್ರೆಸ್ ಖಾತೆ ತೆರೆಯುವಲ್ಲಿ ವಿಫಲವಾಗಿದೆ.
ಬಿಳಿನೆಲೆ ಗ್ರಾಮ ಪಂಚಾಯತ್ ಕಾಂಗ್ರೆಸ್ ಬೆಂಬಲಿತರ ಕೈ ಸೇರಿದೆ. ಕಾಂಗ್ರೆಸ್ ಬೆಂಬಲಿತ ಆರು ಮಂದಿ, ಬಿಜೆಪಿ ಬೆಂಬಲಿತ ಮೂವರು ಜಯ ಗಳಿಸಿದ್ದಾರೆ.