ಕಾರ್ಕಳ,ಡಿ.31(DaijiworldNews/HR): ಕಾರ್ಕಳ ವಿಧಾನ ಸಭಾ ಕ್ಷೇತ್ರದ 34 ಗ್ರಾಮ ಪಂಚಾಯತ್ಗಳ ಪೈಕಿ 12ರಲ್ಲಿ ಗ್ರಾಮ ಪಂಚಾಯತ್ಗಳಲ್ಲಿ ಕಾಂಗ್ರೆಸ್ ಶೂನ್ಯ ಸಂಪಾದನೆ ಗಳಿಸಿದೆ.

ನಾಡ್ಪಾಲು, ಬೆಳಂಜೆ, ಮುದ್ರಾಡಿ, ಹಿರ್ಗಾನ, ಮಾಳ, ಮುಡಾರು, ಕಾಂತಾವರ, ಎರ್ಲಪ್ಪಾಡಿ, ನಂದಳಿಕೆ, ನಿಟ್ಟೆ, ಇರ್ವತ್ತೂರು, ದುರ್ಗ ಗ್ರಾಮ ಪಂಚಾಯತ್ಗಳಲ್ಲಿ ಒಂದೇ ಒಂದು ಸ್ಥಾನ ಪಡೆದುಕೊಳ್ಳುವಲ್ಲಿ ವಿಫಲವಾಗಿದೆ.
ಹೆಬ್ರಿ ತಾಲೂಕು ರೂಪಿಕರಣವಾದ ಬಳಿಕ ಮೊಟ್ಟ ಮೊದಲ ಚುನಾವಣೆಯೇ ಗ್ರಾಮ ಪಂಚಾಯತ್ ಚುವಾವಣೆಯಾಗಿದೆ. ಹೆಬ್ರಿ ಪಂಚಾಯತ್ ನಲ್ಲಿ ಬಿಜೆಪಿ-ಕಾಂಗ್ರೆಸ್ ಬೆಂಬಲಿತರು ತಲಾ 08 ಸ್ಥಾನಗಳನ್ನು ಪಡೆದಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗಳು ಘೋಷಣೆಯಾದ ಬಳಿಕ ಹೆಬ್ರಿ ಗ್ರಾಮ ಪಂಚಾಯತ್ ಯಾವ ಪಕ್ಷದ ಬಗಲಿಗೆ ಸೇರಲಿದೆ ಎಂಬುವುದೇ ಯಕ್ಷ ಪ್ರಶ್ನೆಯಾಗಿ ಉಳಿದಿದೆ.