ಕಾರ್ಕಳ, ಡಿ.31 (DaijiworldNews/PY): ಕಾರ್ಕಳ ತಾಲೂಕಿನ ಒಟ್ಟು 34 ಗ್ರಾಮ ಪಂಚಾಯತ್ನಲ್ಲಿ 30 ಪಂಚಾಯತ್ನಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ಕೇವಲ ಎರಡು ಪಂಚಾಯತ್ಗಳಲ್ಲಿ ಗೆಲುವು ಸಾಧಿಸಿದೆ.

ಚಾರಾ ಗ್ರಾ.ಪಂ.ನಲ್ಲಿ 7 ಬಿಜೆಪಿ ಬೆಂಬಲಿತರು, 3 ಕಾಂಗ್ರೆಸ್ ಬೆಂಬಲಿತರು ಜಯ ಸಾಧಿಸಿದ್ದಾರೆ.
ನಾಡ್ಪಾಲು ಗ್ರಾ.ಪಂ ಬಿಜೆಪಿ ಬೆಂಬಲಿತರ ಕೈ ಸೇರಿದೆ.
ವರಂಗ ಗ್ರಾ.ಪಂ.ನಲ್ಲಿ 14 ಸ್ಥಾನ ಬಿಜೆಪಿ ಬೆಂಬಲಿತರಿಗೆ, 4 ಸ್ಥಾನಗಳು ಕಾಂಗ್ರೆಸ್ ಬೆಂಬಲಿತರ ಪಾಲಾಗಿದೆ.
ಶಿವಪುರ ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತರಿಗೆ ಆರು ಸ್ಥಾನ, ಕಾಂಗ್ರೆಸ್ ಬೆಂಬಲಿತರಿಗೆ ಐದು ಸ್ಥಾನ ದೊರತಿದೆ.
ಕಡ್ತಲ ಗ್ರಾ.ಪಂ.ನಲ್ಲಿ 9 ಸ್ಥಾನ ಬಿಜೆಪಿ ಬೆಂಬಲಿತರಿಗೆ, 2 ಸ್ಥಾನ ಕಾಂಗ್ರೆಸ್ ಬೆಂಬಲಿತರಿಗೆ ಹಾಗೂ ಮೂರು ಸ್ಥಾನ ಪಕ್ಷೇತರ ಗೆದ್ದುಕೊಂಡಿದೆ.
ಮುದ್ರಾಡಿ ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತರ ಪಾಲಾಗಿದ್ದು, 15 ಸ್ಥಾನ ಬಿಜೆಪಿ ಬೆಂಬಲಿತರು ಬಾಚಿಕೊಂಡಿದ್ದಾರೆ.
ಮರ್ಣೆ ಗ್ರಾ.ಪಂ.ನಲ್ಲಿ 14 ಬಿಜೆಪಿ ಬೆಂಬಲಿತರು, 10 ಕಾಂಗ್ರೆಸ್ ಬೆಂಬಲಿತರು ಜಯ ಗಳಿಸಿದ್ದಾರೆ.
ಶಿರ್ಲಾಲು ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತರಿಗೆ 5, ಕಾಂಗ್ರೆಸ್ ಬೆಂಬಲಿತರಿಗೆ 3 ಸ್ಥಾನ ದೊರೆತಿದೆ.
ಕೇರ್ವಾಶೆ ಗ್ರಾ.ಪಂ. ಬಿಜೆಪಿ ಬೆಂಬಲಿತರ ಪಾಲಾಗಿದ್ದು, 6 ಬಿಜೆಪಿ ಬೆಂಬಲಿತರು, 2 ಕಾಂಗ್ರೆಸ್ ಬೆಂಬಲಿತರಿಗೆ ಗೆಲುವು ಲಭಿಸಿದೆ.
ಹಿರ್ಗಾ ಗ್ರಾ.ಪಂ. ಬಿಜೆಪಿ ಬೆಂಬಲಿತರ ಪಾಲಾಗಿದ್ದು, 13 ಸ್ಥಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮಾಳ ಗ್ರಾ.ಪಂ.ನ ಅಧಿಕಾರ ಬಿಜೆಪಿ ಬೆಂಬಲಿತರಿಗೆ ದಕ್ಕಿದ್ದು, ಪಂಚಾಯತ್ನ 15 ಸ್ಥಾನಗಳನ್ನು ಬಿಜೆಪಿ ಬೆಂಬಲಿತರು ಬಾಚಿಕೊಂಡಿದ್ದಾರೆ.
ಮುಡಾರು ಗ್ರಾ.ಪಂ. ಬಿಜೆಪಿ ಬೆಂಬಲಿತರ ಪಾಲಾಗಿದ್ದು, 16 ಸ್ಥಾನಗಳನ್ನು ಬಿಜೆಪಿ ಬೆಂಬಲಿತರು ಪಡೆದುಕೊಂಡಿದ್ದಾರೆ.
ರೆಂಜಾಳ ಗ್ರಾ.ಪಂ.ನಲ್ಲಿ ಏಳು ಸ್ಥಾನ ಬಿಜೆಪಿ ಬೆಂಬಲಿತರಿಗೆ, ಒಂದು ಸ್ಥಾನ ಕಾಂಗ್ರೆಸ್ ಬೆಂಬಲಿತರ ಪಾಲಾಗಿದೆ.
ನಲ್ಲೂರು ಗ್ರಾ.ಪಂ.ನಲ್ಲಿ 11 ಬಿಜೆಪಿ ಬೆಂಬಲಿತರು, 2 ಕಾಂಗ್ರೆಸ್ ಬೆಂಬಲಿತರು ಜಯ ಗಳಿಸಿದ್ದಾರೆ.
ಮಿಯ್ಯಾರು ಗ್ರಾ.ಪಂ.ನಲ್ಲಿ 11 ಸ್ಥಾನ ಬಿಜೆಪಿ ಬೆಂಬಲಿತರಿಗೆ, ಎಂಟು ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಗೆಲುವು ಸಾಧಿಸಿದ್ದಾರೆ.
ಸಾಣೂರು ಗ್ರಾ.ಪಂ.ನಲ್ಲಿ 12 ಬಿಜೆಪಿ ಬೆಂಬಲಿತರು, ಆರು ಕಾಂಗ್ರೆಸ್ ಬೆಂಬಲಿತರು ಜಯ ಗಳಿಸಿದ್ದಾರೆ.
ಕಾಂತಾವರ ಗ್ರಾ.ಪಂ.ನ ಅಧಿಕಾರ ಬಿಜೆಪಿ ಬೆಂಬಲಿತರ ಪಾಲಾಗಿದ್ದು, ಆರು ಸ್ಥಾನಗಳನ್ನು ಬಿಜೆಪಿ ಬೆಂಬಲಿತರು ಪಡೆದುಕೊಂಡಿದ್ದಾರೆ.
ಎರ್ಲಪ್ಪಾಡಿ ಗ್ರಾ.ಪಂ.ನಲ್ಲಿ ಎಂಟು ಬಿಜೆಪಿ ಬೆಂಬಲಿತರು, ನಾಲ್ಕು ಪಕ್ಷೇತರ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.
ನೀರೆ ಗ್ರಾ.ಪಂ.ನಲ್ಲಿ ಬಿಜೆಪಿ ಪಾರಮ್ಯ ಸಾಧಿಸಿದೆ. 13 ಸ್ಥಾನಗಳು ಬಿಜೆಪಿ ಬೆಂಬಲಿತರ ತೆಕ್ಕೆಗೆ ಸೇರಿದ್ದು, ಕಾಂಗ್ರೆಸ್ ಬೆಂಬಲಿತ ಇಬ್ಬರಿಗೆ ಗೆಲುವು ಲಭಿಸಿದೆ.
ಕುಕ್ಕಂದೂರು ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತರು ಗೆಲುವು ಸಾಧಿಸಿದ್ದಾರೆ. 21 ಮಂದಿ ಬಿಜೆಪಿ ಬೆಂಬಲಿತರು ಹಾಗೂ 12 ಕಾಂಗ್ರೆಸ್ ಬೆಂಬಲಿತರು ಜಯಗಳಿಸಿದ್ದಾರೆ.
ಕಲ್ಯಾ ಗ್ರಾ.ಪಂ.ನಲ್ಲಿ 9 ಮಂದಿ ಬಿಜೆಪಿ ಬೆಂಬಲಿತರು ಹಾಗೂ ಓರ್ವ ಕಾಂಗ್ರೆಸ್ ಬೆಂಬಲಿತ ಗೆಲ್ಲುವ ಮುಖೇನ ಪಂಚಾಯತ್ ಅಧಿಕಾರ ಬಿಜೆಪಿ ಬೆಂಬಲಿತರ ಪಾಲಾಗಿದೆ.
ಬೈಲೂರು ಗ್ರಾ.ಪಂ.ನಲ್ಲಿ 11 ಮಂದಿ ಬಿಜೆಪಿ ಬೆಂಬಲಿತರು ಹಾಗೂ ಓರ್ವ ಕಾಂಗ್ರೆಸ್ ಬೆಂಬಲಿತ ಹಾಗೂ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಪಳ್ಳಿ ಗ್ರಾ.ಪಂ.ನಲ್ಲಿ 13 ಮಂದಿ ಬಿಜೆಪಿ ಬೆಂಬಲಿತರು ಹಾಗೂ ಎರಡು ಮಂದಿ ಕಾಂಗ್ರೆಸ್ ಬೆಂಬಲಿತರು ಗೆಲ್ಲುವ ಮುಖೇನ ಪಂಚಾಯತ್ ಅಧಿಕಾರ ಬೆಜೆಪಿ ಬೆಂಬಲಿತರ ಪಾಲಾಗಿದೆ.
ಬೋಳ ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತ 9 ಮಂದಿಗೆ ಹಾಗೂ ಕಾಂಗ್ರೆಸ್ ಬೆಂಬಲಿತ ಓರ್ವ ಗೆಲುವು ಸಾಧಿಸಿದ್ದಾರೆ.
ಮುಂಡ್ಕೂರು ಗ್ರಾ.ಪಂ.ನಲ್ಲಿ 13 ಮಂದಿ ಬಿಜೆಪಿ ಬೆಂಬಲಿತರು, ನಾಲ್ಕು ಕಾಂಗ್ರೆಸ್ ಬೆಂಬಲಿತರು ಗೆಲುವು ಸಾಧಿಸಿದ್ದಾರೆ.
ನಂದಳಿಕೆ ಗ್ರಾ.ಪಂ.ನ ಅಧಿಕಾರ ಬಿಜೆಪಿ ಬೆಂಬಲಿತರ ಪಾಲಾಗಿದ್ದು, 12 ಸ್ಥಾನಗಳನ್ನು ಬಿಜೆಪಿ ಬೆಂಬಲಿತರು ಪಡೆದುಕೊಂಡಿದ್ದಾರೆ.
ನಿಟ್ಟೆ ಗ್ರಾ.ಪಂ.ನ ಅಧಿಕಾರ ಬಿಜೆಪಿ ಬೆಂಬಲಿತರ ತೆಕ್ಕೆಗೆ ಸೇರಿದ್ದು, ಬಿಜೆಪಿ ಬೆಂಬಲಿತರು 31 ಸ್ಥಾನಗಳನ್ನು ಬಾಚಿಕೊಂಡಿದ್ದಾರೆ.
ಬೆಳ್ಮಣ್ ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತ 10 ಅಭ್ಯರ್ಥಿಗಳು, ಕಾಂಗ್ರೆಸ್ ಬೆಂಬಲಿತ ಮೂವರು ಹಾಗೂ ಐದು ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಇರ್ವತ್ತೂರು ಗ್ರಾ.ಪಂ.ನ ಅಧಿಕಾರ ಬಿಜೆಪಿ ಬೆಂಬಲಿತರ ತೆಕ್ಕೆಗೆ ಸೇರಿದ್ದು, ಏಳು ಸ್ಥಾನಗಳನ್ನು ಬಿಜೆಪಿ ಬೆಂಬಲಿತರು ಬಾಚಿದ್ದಾರೆ.
ದುರ್ಗ ಗ್ರಾ.ಪಂ.ನಲ್ಲಿ ಕೂಡಾ ಬಿಜೆಪಿ ಬೆಂಬಲಿತರು ಅಧಿಕಾರವನ್ನು ಪಡೆದುಕೊಂಡಿದ್ದು, 9 ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಇನ್ನಾ ಗ್ರಾ.ಪಂ.ನಲ್ಲಿ ಕಾಂಗ್ರೆಸ್ ಬೆಂಬಲಿತ ಆರು ಮಂದಿಗೆ ಹಾಗೂ ಬಿಜೆಪಿ ಬೆಂಬಲಿತ ಮೂವರು ಜಯಗಳಿಸಿದ್ದಾರೆ.
ಈದು ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತ ಐವರು, ಕಾಂಗ್ರೆಸ್ ಬೆಂಬಲಿತ 13 ಅಭ್ಯರ್ಥಿಗಳು ಹಾಗೂ ಓರ್ವ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಪಕ್ಷೇತರ ಬೆಂಬಲಿತ ಬೆಳಂಜೆ ಗ್ರಾ.ಪಂ.ನಲ್ಲಿ ಮೂರು ಮಂದಿ ಬಿಜೆಪಿ ಬೆಂಬಲಿತರು ಹಾಗೂ ಎಂಟು ಮಂದಿ ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಬೆಳಂಜೆ ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತ ಮೂವರು ಹಾಗೂ ಎಂಟು ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ಹೆಬ್ರಿ ಗ್ರಾ.ಪಂ.ನಲ್ಲಿ ಎಂಟು ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಗೆಲುವು ದಾಖಲಿಸಿದ್ದರೆ, ಎಂಟು ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಜಯ ಗಳಿಸಿ ಸಮಬಲ ಕಾಯ್ದುಕೊಂಡಿದ್ದಾರೆ.