ಮಂಗಳೂರು, ಡಿ.31 (DaijiworldNews/PY): ಆತ್ಮರಕ್ಷಣೆಗೆ ಬುನಾದಿ ಬಂದೂಕು ತರಬೇತಿ ಅವಶ್ಯಕವಾಗಿದ್ದು ಈ ಹಿನ್ನೆಲೆ ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ಅವರು ಸಾರ್ವಜನಿಕರಿಗೆ ಬಂದೂಕು ತರಬೇತಿ ನೀಡಲು ವ್ಯವಸ್ಥೆ ಕೈಗೊಂಡಿದ್ದಾರೆ.

ಸಾಂದರ್ಭಿಕ ಚಿತ್ರ
ಅಗತ್ಯ ಕಾಲದಲ್ಲಿ ದೇಶದ ಸೇವೆಗಾಗಿ ಆತ್ಮರಕ್ಷಣೆಗೆ ಬುನಾದಿ ಬಂದೂಕು ತರಬೇತಿ ಅವಶ್ಯಕವಾಗಿದ್ದು, ಈ ಹಿನ್ನೆಲೆ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ಅವರು ಸಾರ್ವಜನಿಕರಿಗೆ ಬಂದೂಕು ತರಬೇತಿ ನೀಡಲು ವ್ಯವಸ್ಥೆ ಕೈಗೊಂಡಿದ್ದಾರೆ.
ತಮ್ಮ ವಿರುದ್ದ ಯಾವುದೇ ಪೊಲೀಸ್ ಠಾಣೆಗಳಲ್ಲಾಗಲಿ, ಯಾವುದೇ ನ್ಯಾಯಾಲಯಗಳಲ್ಲಾಗಲಿ ಅಪರಾಧಿಕ ಪ್ರಕರಣಗಳಿಲ್ಲದ ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ವಾಸವಾಗಿರುವ ಸಾರ್ವಜನಿಕರು ಈ ತರಬೇತಿಯನ್ನು ಪಡೆಯಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.