ಉಡುಪಿ, ಜ.01 (DaijiworldNews/HR): ಮಣಿಪಾಲದಲ್ಲಿ ಡಿಸೆಂಬರ್ 31 ರಂದು ಗುರುವಾರ ತಡರಾತ್ರಿ ಯುವಕರ ತಂಡವೊಂಡು ಹೊಸ ವರ್ಷವನ್ನು ಆಚರಿಸಿದ್ದಾರೆ.




ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಮಣಿಪಾಲದ ಸರ್ಕಲ್ ಬಳಿ ತಡರಾತ್ರಿ ಯುವಕರು ತಮ್ಮ ಕಾರುಗಳನ್ನು ಓಡಿಸುತ್ತಿರುವುದು ಕಂಡುಬರುತ್ತದೆ. ಪೊಲೀಸ್ ಸಿಬ್ಬಂದಿ ಬಂದ ನಂತರವೇ ಯುವಕರು ಸ್ಥಳವನ್ನು ಖಾಲಿ ಮಾಡಿದ್ದಾರೆ.
ವೃತ್ತದ ಬಳಿ ಕಾರುಗಳಲ್ಲಿ ಓಡಾಡುತ್ತಿದ್ದ ಯುವಕರು ಪೊಲೀಸ್ ಸೈರನ್ ಕೇಳಿದಾಗ ಚದುರಿದ್ದಾರೆ ಎನ್ನಲಾಗಿದೆ.
ಟ್ರಾಫಿಕ್ ವಾಹನಗಳಲ್ಲಿ ಪೊಲೀಸರು ಸಂಚಾರವನ್ನು ನಿಯಂತ್ರಿಸಲು ತೀವ್ರ ಹೆಣಗಾಡಿದ್ದು, ರಸ್ತೆಯಾದ್ಯಂತ ನಿಂತಿದ್ದ ಜನರ ವಿರುದ್ಧ ಲಘು ಲಾಠಿ-ಚಾರ್ಜ್ ಅನ್ನು ನಡೆಸಿದ್ದಾರೆ.