ಉಡುಪಿ, ಜ. 01 (DaijiworldNews/SM): ಹೆಬ್ರಿಯ ಖಾಸಗಿ ಕಾಲೇಜಿನ ಪ್ರಾಧ್ಯಾಪಕರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜನವರಿ 1 ರ ಶುಕ್ರವಾರದಂದು ನಡೆದಿದೆ.

ಮೃತರನ್ನು ಬಾದಗುದ್ದೆಯ ಹೆಬ್ರಿ ಬಳಿಯ ಬಾಡಿಗೆ ಮನೆಯಲ್ಲಿ ತಂಗಿದ್ದ ವೆಂಕಟೇಶ್ ಎಂದು ಗುರುತಿಸಲಾಗಿದೆ. ಅವರ ಮೃತದೇಹ ಕೋಣೆಯಲ್ಲಿ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ರೋನಾ ಮೂಲದ ವೆಂಕಟೇಶ್ ಶಿರ್ಸಿಯ ಹುಡುಗಿಯೊಬ್ಬಳನ್ನು ಪ್ರೀತಿಸಿ ಐದು ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ, ವೆಂಕಟೇಶ್ ಅವರೊಂದಿಗಿನ ಮದುವೆಯ ಬಗ್ಗೆ ಹುಡುಗಿಯ ಕುಟುಂಬಕ್ಕೆ ತಿಳಿದಿರಲಿಲ್ಲ ಎನ್ನಲಾಗಿದೆ.
ಶುಕ್ರವಾರ ಕಾಲೇಜಿಗೆ ತೆರಳಿದ್ದ ವೆಂಕಟೇಶ್ ನಂತರ ಅವರ ಮನೆಗೆ ಮರಳಿದ್ದಾರೆ. ಅಲ್ಲದೆ ಹೆಬ್ರಿಯ ಖಾಸಗಿ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದ ಅವರ ಪತ್ನಿಯನ್ನು ಕೂಡ ತಕ್ಷಣ ಮನೆಗೆ ಮರಳುವಂತೆ ಆತ ಸಂದೇಶ ರವಾನಿಸಿದ್ದ. ಆತನ ಸಂದೇಶ ಸ್ವೀಕರಿಸಿ ಮನೆಗೆ ಮರಳಿದ ಪತ್ನಿಗೆ ಪತಿ ಶವವಾಗಿ ಪತ್ತೆಯಾಗಿದ್ದಾರೆ.
ವೆಂಕಟೇಶ್ ಅವರು ಮೂಡುಬಿದಿರೆಯ ಖಾಸಗಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು. ಕೊರೋನಾ ಲಾಕ್ಡೌನ್ ಕಾರಣ, ಅವರು ಮಾರ್ಚ್ನಿಂದ ನಿರುದ್ಯೋಗಿಗಳಾಗಿದ್ದರು. ಇನ್ನು ವೆಂಕಟೇಶ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬರೆದಿಟ್ಟಿದ್ದರೆನ್ನಲಾದ ಡೆತ್ ನೋಟ್ ಸ್ಥಳದಲ್ಲಿ ಪತ್ತೆಯಾಗಿದ್ದು, ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಹೆಬ್ರಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿ ಆಗಮಿಸಿ ಸ್ಪಾಟ್ ತಪಾಸಣೆ ನಡೆಸಿದ್ದಾರೆ.