ಪುತ್ತೂರು,ಜ.02 (DaijiworldNews/HR): ಒಂಬತ್ತನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ತನ್ನ ಶಾಲೆಯಲ್ಲಿ ನಡೆಯುವ ವಿದ್ಯಾಗಮಕ್ಕೆ ಹಾಜರಾಗಲು ಮನೆಯಿಂದ ಹೊರಟು ಹೋದವಳು ಬಳಿಕ ಗುಡ್ಡದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಶುಕ್ರವಾರ ಸಂಭವಿಸಿದೆ.

ನೇಣು ಬಿಗಿದುಕೊಂಡ ವಿದ್ಯಾರ್ಥಿನಿಯನ್ನು ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲಿನ ವಿದ್ಯಾರ್ಥಿನಿ ದಿವ್ಯಾ (14) ಎಂದು ಗುರುತಿಸಲಾಗಿದೆ.
ತನ್ನ ಶಾಲೆಯಲ್ಲಿ ವಿದ್ಯಾಗಮಕ್ಕೆ ಹಾಜರಾಗಲು ಮನೆಯಿಂದ ಹೊರಟಿದ್ದ ಹುಡುಗಿ ಮಧ್ಯಾಹ್ನ 3 ಗಂಟೆಯಾದರೂ ಹಿಂತಿರುಗದಿದ್ದಾಗ, ಆಕೆಯ ಕುಟುಂಬ ಸದಸ್ಯರು ಶಿಕ್ಷಕರನ್ನು ಕೇಳಿದಾಗ ಕಾರ್ಯಕ್ರಮಕ್ಕೆ ಹಾಜರಾಗಲಿಲ್ಲ ಎಂದು ತಿಳಿದುಬಂದಿದೆ. ನಂತರ ಅವಳನ್ನು ಹುಡುಕಲು ಪ್ರಾರಂಭಿಸಿದಾಗ ಆಕೆಯ ದೇಹವು ಗುಡ್ಡದಲ್ಲಿರುವ ಗೇರು ಬೀಜದ ಮರದಲ್ಲಿ ನೇತಾಡುತ್ತಿದ್ದದು ಕಂಡುಬಂದಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಬೆಳ್ಳಾರೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.