ಕಾಸರಗೋಡು, ಜ.02 (DaijiworldNews/PY): ಡಿವೈಎಫ್ಐ ಕಾರ್ಯಕರ್ತ ಕಲ್ಲೂರಾವಿ ಅಬ್ದುಲ್ ರಹಮಾನ್ (30) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರೈಂ ಬ್ರಾಂಚ್ ಕಸ್ಟಡಿಯಲ್ಲಿರುವ ಪ್ರಮುಖ ಆರೋಪಿ ಇರ್ಷಾದ್ನನ್ನು ಕೃತ್ಯ ನಡೆಸಿದ ಸ್ಥಳಕ್ಕೆ ಕರೆ ತಂದು ತನಿಖಾ ತಂಡ ಮಾಹಿತಿ ಕಲೆ ಹಾಕಿದ್ದು, ಕೃತ್ಯಕ್ಕೆ ಬಳಸಿದ್ದ ಮಾರಕಾಯುಧ ವಶಕ್ಕೆ ಪಡೆಯಲಾಗಿದೆ.


ಡಿ.23ರಂದು ರಾತ್ರಿ ಈ ಹತ್ಯೆ ನಡೆದಿದ್ದು, ಕಾಞಾಂಗಾಡ್ ಕಲ್ಲೂರಾವಿಯಲ್ಲಿ ತಂಡವೊಂದು ಅಬ್ದುಲ್ ರಹಮಾನ್ ಅವರನ್ನು ಇರಿದು ಹತ್ಯೆಗೈದಿತ್ತು.
ಕೃತ್ಯಕ್ಕೆ ಸಂಬಂಧ ಪಟ್ಟಂತೆ ಇರ್ಷಾದ್ ಸೇರಿದಂತೆ ಮೂವರನ್ನು ಈಗಾಗಲೇ ಬಂಧಿಸಲಾಗಿದೆ.