ಮುಂಬೈ, ಜೂ 25 : ಮುಂಬೈನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಮಹಾನಗರಿಯ ಹಲವೆಡೆ ಜಲಾವೃತ್ತವಾಗಿದೆ. ಮುಂದಿನ 48 ತಾಸುಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆಯ ನೀಡಿದೆ. ಅಲ್ಲದೆ ಸಮುದ್ರದಲ್ಲಿ ಸುಮಾರು 4 ಮೀಟರ್ ಎತ್ತರದ ಅಲೆಗಳು ಏಳುತ್ತಿದ್ದು, ತೀರ ಪ್ರದೇಶಗಳಿಗೆ ಸಾರ್ವಜನಿಕರು ಹೋಗದಂತೆ ಎಚ್ಚರಿಕೆ ನೀಡಿದೆ.
ಭಾನುವಾರ ಸುರಿದ ಧಾರಾಕಾರ ಮಳೆಯಿಂದಾಗಿ ಬಾಂದ್ರಾ ಮತ್ತು ವಿಲೇ ಪಾರ್ಲೆ ಹಾಗೂ ಧರವಿ, ಸಿಯಾನ್ ಪ್ರದೇಶಗಳಲ್ಲಿ ಸಂಚಾರಕ್ಕೂ ಅಡ್ಡಿಯಾಗಿದೆ. ಇನ್ನೊಂದೆಡೆ ಮಳೆಯ ಆರ್ಭಟಕ್ಕೆ ಮರ ಬಿದ್ದು ಇಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಇನ್ನೊಂದೆಡೆ ನವಿ ಮುಂಬೈನ ನದಿಯಲ್ಲಿ ಮುಳುಗಿ ಮೂವರು ಮೃತಪಟ್ಟಿದ್ದಾರೆ. ಮೃತರ ದೇಹಗಳಿಗಾಗಿ ಕಾರ್ಯಾಚರಣೆ ನಡೆಯುತ್ತಿದ್ದು, ಒಬ್ಬ ವ್ಯಕ್ತಿಯ ದೇಹವನ್ನು ಹೊರತೆಗೆಯಲಾಗಿದೆ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ವಾಡಾಲಾ ಪೂರ್ವದಲ್ಲಿ ಆ್ಯನ್ ಟಾಪ್ ಹಿಲ್ನಲ್ಲಿ ವಿದ್ಯಾಲಂಕಾರ ರಸ್ತೆಯಲ್ಲಿನ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಕೆಳಗಿನ ನೆಲ ಕುಸಿದ ಕಾರಣ ಹಲವಾರು ಕಾರುಗಳು ಅದರಡಿ ಹೂತು ಹೋಗಿದೆ. ವಶೇಷಗಳಡಿ ಸಿಲುಕಿದ ಎಲ್ಲ ವ್ಯಕ್ತಿಗಳನ್ನು ಜೀವ ಸಹಿತ ರಕ್ಷಿಸಲಾಗಿದೆ ಯಾವುದೇ ಜೀವಹಾನಿ ಆಗಿರುವ ವರದಿಗಳು ಬಂದಿಲ್ಲವಾದರೂ ಮಳೆ ಸಂಬಂಧಿ ದುರಂತಗಳಿಂದ ವ್ಯಾಪಕ ನಾಶ ನಷ್ಟ ಉಂಟಾಗಿದೆ.