ಬೆಳ್ತಂಗಡಿ, ಜ.02 (DaijiworldNews/HR): ಓಮ್ನಿ ಮತ್ತು ರಿಕ್ಷಾ ನಡುವೆ ಭೀಕರ ರಸ್ತೆ ಅಪಘಾತದ ನಡೆದು ಚಾಲಕರಿಬ್ಬರು ಗಂಭೀರ ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಆಳದಂಗಡಿ ಕೆದ್ದು ಎಂಬಲ್ಲಿ ನಡೆದಿದೆ.




ಅಪಘಾತದ ತೀವ್ರತೆಗೆ ಎರಡೂ ವಾಹನಗಳು ಜಖಂಗೊಂಡಿದೆ ಎಂದು ತಿಳಿದು ಬಂದಿದೆ.
ಇನ್ನು ರಿಕ್ಷಾ ಚಾಲಕ ಆಳದಂಗಡಿಯ ನಿವಾಸಿಯಾಗಿದ್ದು ನಾಳೆ ಅವರ ಮನೆಯಲ್ಲಿ ಮದುವೆ ಕಾರ್ಯಕ್ರಮದ ಸಿದ್ದತೆ ನಡೆಯುತ್ತಿತ್ತು ಎನ್ನಲಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.