ವಿಟ್ಲ, ಜ.02 (DaijiworldNews/HR): ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವಕ್ಕೆ ಮುಸ್ಲಿಂ ಕುಟುಂಬಯೊಂದು ಸ್ವಾಗತ ಕೋರುವ ಬ್ಯಾನರ್ ಅಳವಡಿಸುವ ಮೂಲಕ ಸೌಹಾರ್ದತೆ ಮೆರೆದಿದ್ದಾರೆ.

ವಿಟ್ಲ ಸೀಮೆಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪ್ರಧಾನ ದೈವ ಶ್ರೀ ಮುಂಡಾಲತ್ತಾಯ ಮೂಲಸ್ಥಾನ ದೇವಸ್ಯದಲ್ಲಿ ನಿರ್ಮಿಸಲಾಗಿತ್ತು. ಇದರ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವ ನಡೆಯುತ್ತಿದ್ದು, ಈ ಕಾರ್ಯಕ್ರಮಕ್ಕೆ ದೇವಸ್ಯ ಎಂಬಲ್ಲಿಯ ಶಬೀರ್ ಖಾನ್ ದೇವಸ್ಯ ಮತ್ತು ಮನೆಯವರು ಬ್ಯಾನರ್ ಅಳವಡಿಸಿ ಹಿಂದು ಧರ್ಮಕ್ಕೆ ತಮ್ಮೆಲ್ಲರ ಆತ್ಮೀಯ ಗೌರವ ಎಂದು ಕೋರಿದ್ದಾರೆ.
ಈ ಮೂಲಕ ಶಬೀರ್ ಖಾನ್ ದೇವಸ್ಯ ಮತ್ತು ಮನೆಯವರು ಸೌಹಾರ್ದತೆ ಮೆರೆದಿದ್ದಾರೆ.