ಮಣಿಪಾಲ, ಜ.02 (DaijiworldNews/PY): ಮಗನ ಕೈಯಿಂದ ತಾಯಿ ಮೊಬೈಲ್ ಕಸಿದುಕೊಂಡ ಕಾರಣ ಮನನೊಂದ ಬಾಲಕ ಬಾತ್ ರೂಮ್ ಬಾಗಿಲು ಹಾಕಿ ಗಂಟೆಗಟ್ಟಲೆ ಒಳಗೆ ಕುಳಿತ್ತಿದ್ದ ಘಟನೆ ಶನಿವಾರ ಎಮ್ಐಟಿಯ ಎ1 ಅಪಾರ್ಟ್ಮೆಂಟ್ನ ನಾಲ್ಕನೇ ಮಹಡಿಯಲ್ಲಿ ನಡೆದಿದೆ.








ಬಾಲಕನ್ನು ಲಿಯಾನ್ (12) ಎಂದು ಗುರುತಿಸಲಾಗಿದೆ.
ರಾತ್ರಿಯಿಡಿ ಮೊಬೈಲ್ನಲ್ಲಿ ಗೇಮ್ ಆಡುತ್ತಿದ್ದ ಬಾಲಕನಿಗೆ ಆತನ ತಾಯಿ ಕಲಾ ಅವರು ಬೈದು ಆತನ ಕೈಯಿಂದ ಮೊಬೈಲ್ ಕಿತ್ತುಕೊಂಡಿದ್ದರು.
ಇದರಿಂದ ಕೋಪಗೊಂಡ ಬಾಲಕ ಬಾತ್ರೂಮ್ ಬಾಗಿಲು ಹಾಕಿ ಒಳಗೆ ಕೂತುಬಿಟ್ಟಿದ್ದಾನೆ. ತಾಯಿ ಅದೆಷ್ಟು ಮನವೊಲಿಸಿದರೂ ಕೂಡಾ ಆತ ಬಾಗಿಲು ತೆರೆಯಲೇ ಇಲ್ಲ. ಕೊನೆಗೆ ಆತಂಕಗೊಂಡ ಬಾಲಕನ ತಾಯಿ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ.
ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ತಂಡ ನಾಲ್ಕನೆ ಮಹಡಿಗೆ ಹಗ್ಗದ ಸಹಾಯದಿಂದ ಇಳಿದು ಬಾತ್ ರೂಮ್ ಕಿಟಿಕಿ ಮುರಿದು ಒಳ ಪ್ರವೇಶಿಸಿ ಅರೆಪ್ರಜ್ಞಾವಸ್ಥೆಯಲ್ಲಿ ಮಲಗಿದ್ದ ಬಾಲಕನ ರಕ್ಷಣೆ ಮಾಡಿದ್ದಾರೆ.
ಕಾರ್ಯಚರಣೆಯಲ್ಲಿ ಅಗ್ನಿ ಶಾಮಕದಳದ ಮುಖ್ಯ ಅಧಿಕಾರಿ ವಸಂತ್ ಕುಮಾರ್, ಅಶ್ವಿನ್ ಸನಿಲ್, ಸುಧಾಕರ್ ದೇವಾಡಿಗ, ರವಿ ನಾಯಕ್, ಚಾಲಕ ಅಲ್ವಿನ್ ಪ್ರಶಾಂತ್, ಗೃಹರಕ್ಷಕರಾದ ಪ್ರಭಾಕರ್ ದಾವೂದ್ ಹಕೀಮ್ ಪಾಲ್ಗೊಂಡಿದ್ದರು.
ಈ ಕಾರ್ಯಚರಣೆಗೆ ಮಣಿಪಾಲ ಯೂನಿವರ್ಸಿಟಿಯ ಪ್ರಭುದೇವ್ ಮಾಣೆ ರಕ್ಷಕ ತಂಡ ಸಹಕರಿಸಿದ್ದಾರೆ. ಅಗ್ನಿಶಾಮಕ ದಳದ ಈ ಸಾಹಸಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.