ಮಂಗಳೂರು, ಜ. 02 (DaijiworldNews/MB) : ಬಿಕರ್ನಕಟ್ಟೆ ಕಾರ್ಮೆಲ್ ಹಿಲ್ಸ್ನ ಬಾಲ ಯೇಸು ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವವು ಜನವರಿ 14,15 ಮತ್ತು 16 ರಂದು ಆಚರಿಸಲಾಗುವುದು ಎಂದು ಕ್ಷೇತ್ರದ ನಿರ್ದೇಶಕ ಫಾ. ರೋವೆಲ್ ಡಿಸೋಜಾ ಮಾಹಿತಿ ನೀಡಿದರು.

ಜನವರಿ 2 ರ ಶನಿವಾರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ರೋವೆಲ್ ಅವರು, ಜನವರಿ 14 ರಂದು ಬೆಳಿಗ್ಗೆ 10.30 ಕ್ಕೆ ನಡೆಯುವ ಬಲಿಪೂಜೆಯ ಅಧ್ಯಕ್ಷತೆಯನ್ನು ಸೇಂಟ್ ಜೋಸೆಫ್ ಸೆಮಿನರಿಯ ವಂ.ಫಾ. ರೊನಾಲ್ಡ್ ಸೆರಾವೊ ವಹಿಸಲಿದ್ದು ಸಂಜೆ 6 ಗಂಟೆಗೆ ನಡೆಯುವ ಬಲಿಪೂಜೆಯ ಅಧ್ಯಕ್ಷತೆ ಶಿವಮೊಗ್ಗ ಕ್ರೈಸ್ತ ಧರ್ಮಪ್ರಾಂತದ ಧರ್ಮಾಧ್ಯಕ್ಷ ವಂ. ಡಾ. ಫ್ರಾನ್ಸಿಸ್ ಸೆರಾವೊ ವಹಿಸಲಿದ್ದಾರೆ. ಜನವರಿ 15 ರಂದು ಬೆಳಿಗ್ಗೆ 10.30 ಕ್ಕೆ ನಡೆಯುವ ಬಲಿಪೂಜೆಯ ಅಧ್ಯಕ್ಷತೆಯನ್ನು ಮಂಗಳೂರಿನ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ವಹಿಸಲಿದ್ದು, ಸಂಜೆ 6 ಗಂಟೆಗೆ ನಡೆಯುವ ಬಲಿಪೂಜೆಯ ಅಧ್ಯಕ್ಷತೆಯನ್ನು ವಿಕಾರ್ ಜನರಲ್ ವಂ. ಫಾ. ಮ್ಯಾಕ್ಸಿಮ್ ನೊರೊನ್ಹಾ ವಹಿಸಲಿದ್ದಾರೆ. ಜನವರಿ 16 ರಂದು ಬೆಳಿಗ್ಗೆ 10.30 ಕ್ಕೆ ನಡೆಯುವ ಪೂಜೆಯ ಅಧ್ಯಕ್ಷತೆಯನ್ನು ವಂ. ಪಾವ್ಲ್ ಮೆಲ್ವಿನ್ ಡಿಸೋಜ, ಸಂಜೆ 6.00 ಕ್ಕೆ ಬಿಷಪ್ ಅ.ವಂ. ಡಾ.ಅಲೋಶಿಯಸ್ ಪಾವ್ಲ್ ಡಿ ಸೋಜಾ ವಹಿಸಲಿದ್ದಾರೆ.
ಜನವರಿ 14 ರಂದು ದಿನವಿಡೀ ಸಾಮೂಹಿಕ ಪ್ರಾರ್ಥನೆ ಇರಲಿದೆ. ಬೆಳಿಗ್ಗೆ 6 ಗಂಟೆಗೆ ಕೊಂಕಣಿಯಲ್ಲಿ, ಬೆಳಿಗ್ಗೆ 7.30 ಕ್ಕೆ ಇಂಗ್ಲಿಷ್ನಲ್ಲಿ, ಬೆಳಿಗ್ಗೆ 9 ಕ್ಕೆ ಕೊಂಕಣಿಯಲ್ಲಿ, ಮಧ್ಯಾಹ್ನ 1 ಗಂಟೆಗೆ ಕನ್ನಡದಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಲಿದೆ.
ಅನಾರೋಗ್ಯ ಪೀಡಿತರಿಗೆ ಹಾಗೂ ವೃದ್ದರಿಗೆ ಬೆಳಿಗ್ಗೆ 10.30 ಕ್ಕೆ ಕೊಂಕಣಿಯಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಲಿದೆ. ಹಬ್ಬದ ಸಾಮೂಹಿಕ ಪ್ರಾರ್ಥನೆಯು ಜನವರಿ 15 ರಂದು ಬೆಳಿಗ್ಗೆ 6 ಗಂಟೆಗೆ, ಬೆಳಿಗ್ಗೆ 7.30 ಕ್ಕೆ, ಬೆಳಿಗ್ಗೆ 9 ಗಂಟೆಗೆ ಕೊಂಕಣಿಯಲ್ಲಿ, 10.30 ಕ್ಕೆ ಮಕ್ಕಳಿಗೆ ಸಾಮೂಹಿಕ ಪ್ರಾರ್ಥನೆ ಹಾಗೂ ಮಧ್ಯಾಹ್ನ 1 ಗಂಟೆಗೆ ಮಲಯಾಳಂ ಭಾಷೆಯಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಲಿದೆ. ಜನವರಿ 16 ರಂದು ಬೆಳಿಗ್ಗೆ 6 ಗಂಟೆಗೆ ಕೊಂಕಣಿಯಲ್ಲಿ , ಬೆಳಿಗ್ಗೆ 7.30 ಕ್ಕೆ ಇಂಗ್ಲಿಷ್ನಲ್ಲಿ, ಬೆಳಿಗ್ಗೆ 9 ಗಂಟೆಗೆ ಕೊಂಕಣಿಯಲ್ಲಿ, ಮಧ್ಯಾಹ್ನ 1 ಗಂಟೆಗೆ ಕೊಂಕಣಿಯಲ್ಲಿ, ಸಂಜೆ 6 ಗಂಟೆಗೆ ಕೊಂಕಣಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ.
ಹಬ್ಬದ ಔಪಚಾರಿಕ ಉದ್ಘಾಟನೆ ಜನವರಿ 4 ರಂದು ಸಂಜೆ 5.30 ಕ್ಕೆ ಧ್ವಜವನ್ನು ಹಾರಿಸುವ ಮೂಲಕ ನಡೆಯಲಿದೆ.
ವಾರ್ಷಿಕ ಮಹೋತ್ಸವದ ಅಂಗವಾಗಿ ಜನವರಿ 5 ರಿಂದ 13 ರವರೆಗೆ ನವ ದಿನಗಳ ನೊವೇನ ಪ್ರಾರ್ಥನೆ ನಡಯಲಿದೆ. ಈ ಸಂದರ್ಭದಲ್ಲಿ ಪ್ರತಿ ದಿನ 9 ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ಬೆಳಿಗ್ಗೆ 6 ಗಂಟೆಗೆ, ಬೆಳಿಗ್ಗೆ 7.30ಗೆ ಬೆಳಿಗ್ಗೆ 9 ಮತ್ತು ಬೆಳಿಗ್ಗೆ 10.30 ಕ್ಕೆ, ಮಧ್ಯಾಹ್ನ 1.00 ಕ್ಕೆ ಕೊಂಕಣಿಯಲ್ಲಿ, ಸಂಜೆ 4 ಗಂಟೆಗೆ ಮಲಯಾಳಂನಲ್ಲಿ, ಸಂಜೆ 5 ಗಂಟೆಗೆ ಇಂಗ್ಲಿಷ್ ಮತ್ತು 7 ಗಂಟೆಗೆ ಕನ್ನಡದಲ್ಲಿ ನೆರವೇರಲಿದೆ. ಸಂಜೆ 6 ಗಂಟೆಗೆ ಮುಖ್ಯ ಸಾಮೂಹಿಕ ಪ್ರಾರ್ಥನೆ ಕೊಂಕಣಿಯಲ್ಲಿ ಬಹಿರಂಗವಾಗಿ ಕೊಂಕಣಿಯಲ್ಲಿ ನಡೆಯಲಿದೆ.
ಕೊರೊನಾದ ನಿಯಮಗಳಿಗೆ ಅನುಸಾರವಾಗಿ ಬಾಲ ಯೇಸುವಿನ ಕ್ಷೇತ್ರದಲ್ಲಿ ಎಲ್ಲಾ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ. ನೊವೇನ ದಿನಗಳಲ್ಲಿ ಹಾಗೂ ಹಬ್ಬದ ದಿನಗಳಲ್ಲಿ ನಿಯಮಿತವಾಗಿ ಆರೋಗ್ಯ ತಪಾಸಣೆ ಇರುತ್ತದೆ. ಅಗತ್ಯವಿರುವವರಿಗೆ ಮಾಸ್ಕ್ ನೀಡಲಾಗುತ್ತದೆ. ಪೂಜಾ ಸ್ಥಳವನ್ನು ನೈರ್ಮಲ್ಯಗೊಳಿಸಲಾಗುವುದು ಮತ್ತು ಎಲ್ಲರಿಗೂ ಶುದ್ಧ ಕುಡಿಯುವ ನೀರು ಮತ್ತು ಇತರ ಸೌಲಭ್ಯಗಳನ್ನು ಒದಗಿಸಲಾಗುವುದು. ಹಾಗೆಯೇ ಕೊರೊನಾದಿಂದ ರಕ್ಷಣೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕ್ಷೇತ್ರದ ಉಪ ಮಠಾಧೀಶ ಲ್ಯಾನ್ಸಿ ಲೂವಿಸ್, ಸ್ಟಾನ್ಲಿ ಬಂಟ್ವಾಳ್ ಉಪಸ್ಥಿತರಿದ್ದರು.