ಕಾರ್ಕಳ, ಜ. 02 (DaijiworldNews/MB) : ಬಜಗೋಳಿ-ಹೊಸ್ಮಾರು ನಡುವೆ ಹಾದು ಹೋದ ರಾಜ್ಯ ಹೆದ್ದಾರಿಯ ಪಾಜಿಗುಡ್ಡೆ ಅಪಾಯಕಾರಿ ತಿರುವಿನಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಕಂದಕಕ್ಕೆ ಮುನ್ನುಗ್ಗಿದ್ದು, ಕೂದಲೆಳೆಯ ಅಂತರದಲ್ಲಿ ಭಾರೀ ಅನಾಹುತ ತಪ್ಪಿದೆ.



ಧರ್ಮಸ್ಥಳದಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಕೆಎ-04 ಎಂಯು2693 ನಂಬ್ರದ ಕಾರು ಘಟನೆಯಲ್ಲಿ ಹಾನಿಗೊಳಗಾಗಿದೆ.
ನಲ್ಲೂರು ಪಾಜಿಗುಡ್ಡೆ ಅಪಾಯಕಾರಿ ತಿರುವು ಅರಿತುಕೊಳ್ಳದ ಚಾಲಕ ತನ್ನ ವಾಹನವನ್ನು ಅತೀ ವೇಗವಾಗಿ ಚಲಾಯಿಸಿರುವುದು ಘಟನೆಗೆ ಕಾರಣವೆನ್ನಲಾಗಿದೆ.
ಕಂದಕಕ್ಕೆ ನುಗ್ಗಿ ನಿಂತುಕೊಂಡಿದ್ದ ಕಾರಿನ ಸನ್ನಿಹದಲ್ಲಿ ಭಾರೀ ಗಾತ್ರದ ಬಂಡೆ ಇತ್ತು. ಅದಕ್ಕೆ ಕಾರು ಡಿಕ್ಕಿಯಾಗುತ್ತಿದ್ದರೆ ಭಾರೀ ಅನಾಹುತಗಳು ಸಂಭವಿಸುವ ಸಾಧ್ಯತೆಗಳು ಇತ್ತು.