ಕಾರ್ಕಳ, ಜ. 02 (DaijiworldNews/MB) : ಚಿಕ್ಕಮಗಳೂರಿನ ಶೃಂಗೇರಿಯಿಂದ ಕಾರ್ಕಳ ಕಡೆಗೆ ತರಕಾರಿ ಸಾಗಾಟ ಮಾಡುತ್ತಿದ್ದ ಕೆಎ 18 ಬಿ 1273 ನಂಬ್ರದ ಈಚರ್ ವಾಹನವೊಂದು ನಸುಕಿನ ಜಾವದಲ್ಲಿ ರಸ್ತೆಯಲ್ಲಿ ಪಲ್ಟಿ ಹೊಡೆದ ಪರಿಣಾಮವಾಗಿ ಚಾಲಕ ದಾರುಣ ರೀತಿಯಲ್ಲಿ ಮೃತಪಟ್ಟ ಘಟನೆ ಸಂಭವಿಸಿದೆ.





ಚಿಕ್ಕಮಗಳೂರು ಅಲ್ದೂರು ನಿವಾಸಿ ಅಣ್ಣಪ್ಪ(57) ಘಟನೆಯಲ್ಲಿ ಜೀವತೆತ್ತ ದುರ್ದೈವಿ.
ಮಾಳದ ಓಟೆಹಳ್ಳಿ ಸೇತುವೆ ಸಮೀಪ ಲಾರಿ ಅತೀ ವೇಗವಾಗಿ ಸಾಗಿ ಬಂದು ಪರಿಣಾಮವಾಗಿ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿತ್ತು. ಲಾರಿಯಡಿಯಲ್ಲಿ ಸಿಲುಕಿಕೊಂಡಿದ್ದ ಚಾಲಕನನ್ನು ಹೊರ ತೆಗೆಯಲು ಭಾರೀ ಪ್ರಯಾಸ ಪಡಬೇಕಾಯಿತು. ತೀವ್ರವಾಗಿ ಗಾಯಗೊಂಡ ಚಾಲಕ ಘಟನಾ ಸ್ಥಳದಲ್ಲಿಯೇ ಸಾವಿಗೀಡಾಗಿದ್ದರು.