ಮಂಗಳೂರು, ಜ. 02 (DaijiworldNews/MB) : ಅಕ್ಷಯ ಚೆಂಡೆ ಬಳಗ ಹಾಗೂ ಸ್ನೇಹ ಬಂಧು ಸಹಯೋಗದಲ್ಲಿ ಶ್ರೀ ಬ್ರಹ್ಮ ಬೈದರ್ಕಳ ಗರೋಡಿಯಲ್ಲಿ ಜನವರಿ 1 ರ ಶುಕ್ರವಾರ ಸಂಜೆ 5 ರಿಂದ 12 ರವರೆಗೆ ಚೆಂಡೆ ಪ್ರದರ್ಶನ ಹಾಗೂ ವಿಶೇಷ ವೇಷಗಳೊಂದಿಗೆ ನಾಲ್ಕು ವರ್ಷದ ಬಾಲಕ ಆದರ್ಶ್ನ ಚಿಕಿತ್ಸೆಗಾಗಿ ನಿಧಿ ಸಂಗ್ರಹ ನಡೆಸಿದರು.













ವಿಭಿನ್ನ ವೇಷ ಧರಿಸಿ ಮತ್ತು ಆಕರ್ಷಕ ಚೆಂಡೆ ನೃತ್ಯಗಳೊಂದಿಗೆ, ಅಕ್ಷಯ ಚೆಂಡೆ ಬಳಗ ಮತ್ತು ಸ್ನೇಹ ಬಂಧು ರಕ್ತ ಕ್ಯಾನ್ಸರ್ ನಿಂದ ಬಳಲುತ್ತಿರುವ ಆದರ್ಶ್ ಅವರಿಗೆ ಸಹಾಯ ಮಾಡುವಂತೆ ಭಕ್ತರಿಗೆ ಒತ್ತಾಯಿಸಿದರು.
ತಂಡವು ಏಳು ಗಂಟೆಗಳಲ್ಲಿ 1.88 ಲಕ್ಷ ರೂಗಳನ್ನು ಸಂಗ್ರಹಿಸಿವೆ.
ಈ ಬಗ್ಗೆ ದೈಜಿವರ್ಲ್ಡ್ ಜೊತೆ ಮಾತನಾಡಿದ ಅಕ್ಷಯ ಚೆಂಡೆ ಬಳಗದ ಮಾಲೀಕ ನಾಮದೇವ್, "ಸ್ನೇಹ ಬಂಧು ಸದಸ್ಯರು ನನ್ನನ್ನು ಸಂಪರ್ಕಿಸಿ, ಬಾಲಕನ ಚಿಕಿತ್ಸೆಗೆ ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿದರು. ನಮ್ಮ ಈ ಉದಾತ್ತ ಕಾರ್ಯಕ್ಕಾಗಿ ಗುಂಡಳಿಕೆಯ ಭದ್ರಕಾಳಿ ಚೆಂಡೆ ಮತ್ತು ಮುಲ್ಲಕಾಡಿನ ಶಬರಿ ಚೆಂಡೆ ಬಳಗ ಕೈಜೋಡಿಸಿದವು. ಇದರಿಂದಾಗಿ ನಾವು ಯಶಸ್ವಿಯಾಗಿ ಭಕ್ತರಿಂದ ಸಹಾಯ ನಿಧಿ ಸಂಗ್ರಹಿಸಲು ಸಾಧ್ಯವಾಯಿತು" ಎಂದು ಹೇಳಿದರು.