ಸುಳ್ಯ, ಜ. 03 (DaijiworldNews/MB) : ಮದುವೆ ಮನೆಗೆ ಹೋಗುತ್ತಿದ್ದ ಬಸ್ ಪಲ್ಟಿಯಾಗಿ ಹಲವರಿಗೆ ಗಾಯವಾದ ಘಟನೆ ರವಿವಾರ ಆಲೆಟ್ಟಿ ಬಳಿಯ ಬಡ್ಡಡ್ಕದಲ್ಲಿ ಸಂಭವಿಸಿದೆ.




ಖಾಸಗಿ ಬಸ್ ಸುಳ್ಯದಿಂದ ಪಾಣತ್ತೂರು ಕಡೆಗೆ ಸಂಚಾರ ಮಾಡುತ್ತಿತ್ತು ಎಂದು ವರದಿಯಾಗಿದೆ.
ಈ ಖಾಸಗಿ ಬಸ್ ಪುತ್ತೂರಿನದ್ದಾಗಿದ್ದು, ವಿವಾಹ ಸಮಾರಂಭಕ್ಕೆ ಜನರನ್ನು ಕರೆದೊಯ್ಯುತ್ತಿತ್ತು. ಆಲೆಟ್ಟಿ ಬಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ.
ಘಟನೆಯಲ್ಲಿ ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೆಲವರಿಗೆ ಸಣ್ಣಪುಟ್ಟ ಗಾಯವಾಗಿದೆ. ಪ್ರಸ್ತುತ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.