ಮಂಗಳೂರು, ಜ. 03 (DaijiworldNews/MB) : ನವಜಾತ ಶಿಶುವಿನ ಮೃತದೇಹವು ಡಿಸೆಂಬರ್ 2 ರ ಶನಿವಾರದಂದು ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯ ತೋಟಬೆಂಗ್ರೆಯ ಫಲ್ಗುಣಿ ನದಿಯಲ್ಲಿ ತೇಲುತ್ತಿರುವುದು ಕಂಡು ಬಂದಿದೆ.

ಎಂಎಂಎಸ್ ಮದೀನಾ ಮೀನುಗಾರಿಕೆ ದೋಣಿ ಮೀನುಗಾರಿಕೆ ನಡೆಸಿ ಫಲ್ಗುಣಿ ನದಿಯ ದಂಡಕ್ಕೆ ಮರಳಿದಾಗ ಈ ಘಟನೆ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ.
ದೋಣಿಯಲ್ಲಿದ್ದ ಕಾರ್ಮಿಕರಾದ ಫೈಜಲ್ ಮತ್ತು ರಹೀಮ್ ನವಜಾತ ಶಿಶುವಿನ ಮೃತದೇಹ ನೀರಿನ ಮೇಲೆ ತೇಲುತ್ತಿರುವುದನ್ನು ಗಮನಿಸಿದ್ದು ತಕ್ಷಣ, ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ನವಜಾತ ಶಿಶುವು ಹೆಣ್ಣಾಗಿದ್ದು ಒಂದು ಅಥವಾ ಎರಡು ದಿನದ್ದಾಗಿದೆ ಎಂದು ಅಂದಾಜಿಸಲಾಗಿದೆ. ಮಗು ಹುಟ್ಟಿರುವುದು ಯಾರಿಗೂ ತಿಳಿಯಬಾರದೆಂಬ ಉದ್ದೇಶದಿಂದ ಮಗುವನ್ನು ಅಥವಾ ಮಗುವಿನ ಮೃತದೇಹವನ್ನು ನದಿಗೆ ಎಸೆದಿರಬಹುದು ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಪಣಂಬೂರು ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿದ್ದಾರೆ.