ಕಾಸರಗೋಡು,ಜ.04 (DaijiworldNews/HR): ಪಾಣತ್ತೂರಿನಲ್ಲಿ ಉಂಟಾದ ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯ ಹಾಗೂ ಅಜಾಗೂರೂಕತೆ ಕಾರಣ ಎಂದು ಜಿಲ್ಲಾಧಿಕಾರಿಯವರು ಸಾರಿಗೆ ಸಚಿವರಿಗೆ ಸಲ್ಲಿಸಿದ ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಿದೆ.

ಬಸ್ಸಿನ ಇಂಜಿನ್ನಲ್ಲಿ ತೊಂದರೆ ಕಾಣಿಸಿಕೊಂಡಿಲ್ಲ, ಟಯರ್, ಬ್ರೇಕ್ ವೈಫಲ್ಯ ಪ್ರಾಥಮಿಕ ತಪಾಸಣೆಯಿಂದ ಕಂಡು ಬಂದಿಲ್ಲ. ಇಳಿಜಾರು ರಸ್ತೆಯಾದುದರಿಂದ ಚಾಲಕನ ಅಜಾಗೂರೂಕತೆ ಹಾಗೂ ಈ ರಸ್ತೆಯ ಬಗ್ಗೆ ತಿಳುವಳಿಕೆ ಕೊರತೆ ಮೊದಲಾದವುಗಳು ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಧಾಕೃಷ್ಣನ್ ತಿಳಿಸಿದ್ದಾರೆ.
ಬಸ್ಸಿನಲ್ಲಿ ನಿಗಧಿಗಿಂತ ಅಧಿಕ ಪ್ರಯಾಣಿಕರಿದ್ದುದು ಅಪಘಾತಕ್ಕೆ ಇನ್ನೊಂದು ಕಾರಣ ಆಗಿರಬಹುದು ಎಂದು ಅನುಮಾನ ವ್ಯಕ್ರಪಡಿಸಲಾಗಿದೆ.
ಕಿರಿದಾದ ಹಾಗೂ ಇಳಿಜಾರು ರಸ್ತೆಯಾದುದರಿಂದ ಚಾಲಕನಿಗೆ ಅರಿವು ಇಲ್ಲದಿರುವುದು, ಅಧಿಕ ಪ್ರಯಾಣಿಕರನ್ನು ತುಂಬಿಸಿದ್ದು ಮೊದಲಾದ ಕಾರಣಗಳು ಅಪಘಾತಕ್ಕೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ.
ಅಪಘಾತದ ಬಗ್ಗೆ ತನಿಖೆ ನಡೆಸಿ ಉಪ ಜಿಲ್ಲಾಧಿಕಾರಿ ಮೇಘಶ್ರೀ ಹಾಗೂ ಸಾರಿಗೆ ಇಲಾಖೆಗೆ ಆದೇಶ ನೀಡಿತ್ತು. ಇದರಂತೆ ಪ್ರಾಥಮಿಕ ವರದಿ ತಯಾರಿಸಿ ಸಾರಿಗೆ ಸಚಿವರಿಗೆನೀಡಲಾಗಿದೆ.
ಈ ನಡುವೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾಗಿರುವ 11 ಮಂದಿ ಚೇತರಿಸುತ್ತಿದ್ದಾರೆ. ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.