ಪುತ್ತೂರು, ಜ. 04 (DaijiworldNews/MB) : ಎಣ್ಣೆಯುಕ್ತ ಚರ್ಮ ಮತ್ತು ಹಾರ್ಮೋನುಗಳ ಬದಲಾವಣೆಗಳು ಸೇರಿದಂತೆ ವಿವಿಧ ಕಾರಣಗಳಿಂದ ಮುಖದಲ್ಲಿ ಮೊಡವೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಇದನ್ನು ಮನೆಮದ್ದು ಅಥವಾ ಚರ್ಮರೋಗ ತಜ್ಞರ ಸಲಹೆಯಂತೆ ಔಷಧಿ ಪಡೆದು ಕಡಿಮೆಗೊಳಿಸಬಹುದು. ಆದರೆ ಇಲ್ಲೋರ್ವ ಬಾಲಕಿಯು ತನ್ನ ಮುಖದಲ್ಲಿ ಮೊಡವೆಯಿದೆ ಎಂದು ಮುಜುಗರಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಜಿಲ್ಲೆಯ ಪುತ್ತೂರು ತಾಲ್ಲೂಕಿನ ಪಾಲ್ತಾಡಿಯಲ್ಲಿ ಈ ದುರಂತ ಘಟನೆ ನಡೆದಿದೆ. ಕೆಯ್ಯೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ಒಂಬತ್ತನೇ ತರಗತಿ ವಿದ್ಯಾರ್ಥಿನಿಯಾಗಿರುವ ದಿವ್ಯಾ (15) ಮೊಡೆವೆಯಿದೆ ಎಂದು ಆತ್ಮಹತ್ಯೆ ಮಾಡಿಕೊಂಡ ಬಾಲಕಿ.
ದಿವ್ಯಾ ಮುಖದಲ್ಲಿ ಮೊಡವೆಗಳು ಕಾಣಿಸಿಕೊಂಡಿದ್ದರಿಂದ ತುಂಬಾ ದುಃಖಿತಳಾಗಿದ್ದಳು ಎನ್ನಲಾಗಿದೆ. ಅದೇ ಕಾರಣದಿಂದ ಖಿನ್ನತೆಗೆ ಒಳಗಾಗಿದ್ದಳು ಎಂದು ವರದಿಯಾಗಿದೆ.
ಬೆಳ್ಳಾರೆ ಪೊಲೀಸ್ ಠಾಣೆ ವ್ಯಾಪ್ತಿಯ ಗೇರುಗುಡ್ಡೆಯಲ್ಲಿ ಬಾಲಕಿ ನೇಣಿಗೆ ಶರಣಾಗಿದ್ದಾರೆ.