ಮಂಗಳೂರು, ಜ. 04 (DaijiworldNews/MB) : ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಉಳ್ಳಾಲದ ಎಲ್ಲಾ ದೇವಾಲಯಗಳಲ್ಲಿ ಪೋಸ್ಟರ್ ಅಳವಡಿಸಿದೆ. ಇದರಲ್ಲಿ ದೇವಾಲಯಕ್ಕೆ ಪ್ರವೇಶಸಲು ವಸ್ತ್ರ ಸಂಹಿತೆಯನ್ನು ನಿಗದಿಪಡಿಸಲಾಗಿದೆ.


ಈ ದೇವಾಲಯಗಳಲ್ಲಿ ನೇತು ಹಾಕಿರುವ ಬ್ಯಾನರ್ಗಳ ಪ್ರಕಾರ, ಸಾಂಪ್ರದಾಯಿಕ ಉಡುಗೆ ಧರಿಸಿದವರಿಗೆ ಮಾತ್ರ ದೇವಾಲಯಕ್ಕೆ ಪ್ರವೇಶಕ್ಕೆ ಅವಕಾಶವಿದೆ.
ಈ ಪೋಸ್ಟರ್ಗಳನ್ನು ಉಳ್ಳಾಲದಲ್ಲಿರುವ ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೇವಸ್ಥಾನ ಸೇರಿದಂತೆ ಹಲವು ದೇವಾಲಯಗಳಲ್ಲಿ ನೇತು ಹಾಕಲಾಗಿದೆ.