ಕಾಸರಗೋಡು, ಜ.04 (DaijiworldNews/PY): ಆಟೋ ರಿಕ್ಷಾದ ಟಯರ್ ಕಳಚಿ ನಿಯಂತ್ರಣ ತಪ್ಪಿ ಮಗುಚಿದ ಪರಿಣಾಮ ಮಗು ಮೃತಪಟ್ಟ ಘಟನೆ ಸೋಮವಾರ ಸಂಜೆ ಬಂದ್ಯೋಡು-ಪೆರ್ಮುದೆ ರಸ್ತೆಯ ಮೀಪಿರಿಯಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ
ಕಯ್ಯಾರ್ ಪಿಲಿಯಂದೂರಿನ ಕಾಸಿಂ-ಫಾಯಿಸಾ ದಂಪತಿ ಪುತ್ರ ರಿಜ್ವಾನ್ ಮೃತಪಟ್ಟ ಮಗು.
ತಾಯಿ-ಮಗು ಬಂದ್ಯೋಡು ಕಡೆಗೆ ತೆರಳುತ್ತಿದ್ದಾಗ ಆಟೋ ರಿಕ್ಷಾದ ಟಯರ್ ಕಳಚಿದ್ದು, ಇದರಿಂದ ಆಟೋ ಮಗುಚಿ ಬಿದ್ದ ಪರಿಣಾಮ ಗಂಭೀರ ಗಾಯಗೊಂಡ ಮಗು ಮೃತಪಟ್ಟಿದೆ.
ತಾಯಿ ಫಾಯಿಸಾ ಮತ್ತು ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಘಟನೆಯ ಬಗ್ಗೆ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.