ಕಾಸರಗೋಡು, ಜ.04 (DaijiworldNews/PY): ಜಿಲ್ಲೆಯಲ್ಲಿ ಸೋಮವಾರ 27 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಇಲ್ಲಿಯವರೆಗೆ 24,392 ಮಂದಿಗೆ ಕೊರೊನಾ ದೃಢಪಟ್ಟಿದೆ.

ಸೋಮವಾರ ದೃಢಪಟ್ಟ 27 ಮಂದಿಯ ಪೈಕಿ ಸಂಪರ್ಕದಿಂದ 26 ಮಂದಿಗೆ ಹಾಗೂ ವಿದೇಶದಿಂದ ಬಂದ ಓರ್ವನಲ್ಲಿ ಸೋಂಕು ಪತ್ತೆಯಾಗಿದೆ.
ಇಂದು 159 ಮಂದಿ ಗುಣಮುಖರಾಗಿದ್ದು, ಇಲ್ಲಿಯವರೆಗೆ 23,370 ಮಂದಿ ಗುಣಮುಖರಾಗಿದ್ದಾರೆ. ಸದ್ಯ 768 ಮಂದಿ ಚಿಕಿತ್ಸೆಯಲ್ಲಿದ್ದು, 3,632 ಮಂದಿ ನಿಗಾದಲ್ಲಿದ್ದಾರೆ.
ಸೋಂಕಿತರಲ್ಲಿ 1,126 ಮಂದಿ ವಿದೇಶದಿಂದ ಹಾಗೂ 886 ಮಂದಿ ಹೊರ ರಾಜ್ಯಗಳಿಂದ ಬಂದವರಾಗಿದ್ದಾರೆ.