ಮಂಗಳೂರು, ಜ.04 (DaijiworldNews/PY): ನಗರದ ಮೇರಿಹಿಲ್ನಲ್ಲಿರುವ ಜಿಲ್ಲಾ ಗೃಹರಕ್ಷಕ ದಳದ ಕಛೇರಿಗೆ ಜನವರಿ 3 ರಂದು ಆರಕ್ಷಕ ಮಹಾನಿರ್ದೇಶಕ, ಗೃಹರಕ್ಷಕ ದಳದ ಮಹಾ ಸಮಾದೇಷ್ಟರು ಮತ್ತು ಪೌರರಕ್ಷಣೆ ನಿರ್ದೇಶಕ ಡಾ.ಅಮರ್ ಕುಮಾರ್ ಪಾಂಡೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, "ಕಾಲಕಾಲಕ್ಕೆ ಗೃಹರಕ್ಷಕರಿಗೆ ಸೂಕ್ತ ತರಬೇತಿ ನೀಡಬೇಕು. ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ ಮತ್ತು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಗೃಹರಕ್ಷಕರಿಗೆ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ. ಗೃಹರಕ್ಷಕರ ವೇತನವನ್ನು ಸಕಾಲದಲ್ಲಿ ನೀಡಲು ಬೇಕಾದ ಅಗತ್ಯ ತುರ್ತು ಕ್ರಮಗಳನ್ನು ನೀಡಬೇಕು" ಎಂದರು.
ಪೊಲೀಸ್ ಆಯುಕ್ತ ಶಶಿಕುಮಾರ್, ದಕ್ಷಿಣ ಕನ್ನಡ ಪೊಲೀಸ್ ಅಧೀಕ್ಷಕ ಡಾ.ಲಕ್ಷ್ಮೀ ಪ್ರಸಾದ್, ಡಿಸಿಪಿ ಹರಿರಾಮ್ ಶಂಕರ್, ಹಾಗೂ ಜಿಲ್ಲಾ ಗೃಹರಕ್ಷಕ ದಳ ಸಮಾದೇಷ್ಟರು ಮತ್ತು ಜಿಲ್ಲಾ ಪೌರರಕ್ಷಣೆ ಪಡೆ ಚೀಫ್ವಾರ್ಡನ್ ಡಾ.ಮುರಲೀಮೋಹನ್ ಚೂಂತಾರು, ಜಿಲ್ಲಾ ಗೃಹರಕ್ಷಕದಳ ಉಪ ಸಮಾದೇಷ್ಟ ರಮೇಶ್, ಕಛೇರಿ ಸಿಬ್ಬಂದಿಗಳು ಹಾಗೂ ಗೃಹರಕ್ಷಕರು ಉಪಸ್ಥಿತರಿದ್ದರು.