ವಿಟ್ಲ, ಜ 04 (DaijiworldNews/SM): ಸಾಮಾಜಿಕ ಜಾಲತಾಣದಲ್ಲಿ ಎಸ್ ಡಿ ಪಿ ಐ ಬಂಟ್ವಾಳ, ಉಜಿರೆ ಭಾಗದ ಕಾರ್ಯಾಲಯಕ್ಕೆ ಬೆಂಕಿ ಯಾಕೆ ಕೊಡಬಾರದು ಎಂಬ ಸಂದೇಶವನ್ನು ಪೋಸ್ಟ್ ಮಾಡಿ ಪ್ರಚೋದನೆ ನೀಡಿದ ಹಿನ್ನೆಲೆಯಲ್ಲಿ ಅಕ್ಷಯ ರಜಪೂತ ಕಲ್ಲಡ್ಕ ಯಾನೆ ಅಕ್ಷಯ್ ಆರ್ಯನ್ ರಾಥೋಡ್ ಮತ್ತು ಇತರರ ವಿರುದ್ಧ ವಿಟ್ಲ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.


ಜನ ವಾಸವಿರುವ ಕಟ್ಟಡಕ್ಕೆ ಬೆಂಕಿ ಇಟ್ಟು ಸುಟ್ಟು ಹಾಕುವ ಪ್ರಯತ್ನ ಮಾಡಲಾಗಿದೆ ಎಂದು ಅಬ್ದುಲ್ ರಹಿಮಾನ್ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಮತ್ತೊಂದೆಡೆ ಅಕ್ಷಯ ಪರ ವಹಿಸಿಕೊಂಡು ಬಿಜೆಪಿ ಮುಖಂಡರು ಠಾಣೆಗೆ ಆಗಮಿಸಿ ಮಾತುಕತೆ ನಡೆಸಿ ಪ್ರಕರಣವನ್ನು ಹಿಂತೆಗೆದುಕೊಳ್ಳುವಂತೆ ಇಲಾಖೆಯ ಅಧಿಕಾರಿಗಳ ಮೇಲೆ ಒತ್ತಡ ಹೇರುವ ಕಾರ್ಯವನ್ನು ಮಾಡಿದ್ದಾರೆ ಎನ್ನುವ ಆರೋಪವೂ ಕೂಡ ವ್ಯಕ್ತವಾಗಿದೆ.