ಸುಳ್ಯ, ಜ 05 (DaijiworldNews/SM): ಬೈಕಿನಲ್ಲಿ ಬಂದವರು ಸ್ಪ್ರೇ ಸಿಂಪಡಿಸಿ ನನ್ನನ್ನು ಪ್ರಜ್ಞೆ ತಪ್ಪಿಸಿ ಬೇರೆ ವಾಹನದ ಶಬ್ದ ಕೇಳಿದೊಡನೆ ತಪ್ಪಿಸಿಕೊಂಡು ಹೋದರು ಎಂದು ಹೇಳಿಕೆ ನೀಡಿದ ಕುಕ್ಕುಜಡ್ಕ ಶಾಲಾ ವಿದ್ಯಾರ್ಥಿನಿಯ ಹೇಳಿಕೆ ಈಗ ಹೊಸದೊಂದು ತಿರುವು ಪಡಕೊಂಡಿದ್ದು, ಜನರ ಅಚ್ಚರಿಗೆ ಕಾರಣವಾಗಿದೆ.

ರಾಗಿಯಡ್ಕ ನಿವಾಸಿಯಾಗಿರುವ ಕುಕ್ಕುಜಡ್ಕ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಶಾಲೆಗೆ ಹೋಗಲು ಮನಸಿಲ್ಲದ ಕಾರಣ ಹುಡುಗಿಯೇ ಸ್ಪ್ರೆ ಪ್ರಕರಣ ಕತೆ ಕಟ್ಟಿದ್ದಳು. ಸ್ಥಳೀಯರು ಆಕೆಯನ್ನು ಸುಳ್ಯ ಆಸ್ಪತ್ರೆಗೆ ಕರೆ ತಂದಿದ್ದರು. ಬಳಿಕ ಪೊಲೀಸ್ ವಿಚಾರಣೆಯ ವೇಳೆ ಆಕೆ ನಾನು ಶಾಲೆಗೆ ಹೋಗಲು ಮನಸಿಲ್ಲದ ಕಾರಣ ಈ ಹೇಳಿಕೆ ನೀಡಿದ್ದೆ. ಯಾರು ನನಗೆ ಬೈಕ್ ಅಲ್ಲಿ ಬಂದು ಸ್ಪ್ರೇ ಮಾಡಿಲ್ಲ ಎಂದು ಬೆಳ್ಳಾರೆ ಠಾಣೆಯಲ್ಲಿ ಹೇಳಿಕೆ ನೀಡಿದ್ದಾಳೆ.
ಆರಂಭದಲ್ಲಿ ಕಿಡ್ನ್ಯಾಪ್ ಕಥೆ ಕಟ್ಟಿದ್ದ ವಿದ್ಯಾರ್ಥಿನಿ:
ನಡೆದುಕೊಂಡು ಹೋಗುತ್ತಿದ್ದ ಬಾಲಕಿಯ ಮುಖಕ್ಕೆ ಸ್ಪ್ರೆ ಮಾಡಿ ಬಳಿಕ ಶಾಲಾ ಬಾಲಕಿಯನ್ನು ಅಪಹರಣಕ್ಕೆ ಯತ್ನಿಸಲಾಗಿದೆ ಎಂದು ವಿದ್ಯಾರ್ಥಿನಿ ತಿಳಿಸಿದ್ದಳು. ಇನ್ನು ಬಾಲಕಿ ಕುಕ್ಕುಜಡ್ಕ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ. ಈಕೆ ನಡೆದುಕೊಂಡು ಹೊಗುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಬೈಕ್ ನಲ್ಲಿ ಬಂದು ಕೃತ್ಯ ಎಸಗಿದ್ದಾರೆ ಎಂದಿದ್ದಳು. ಆದರೆ, ಇದೀಗ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.