ಜೂ 26 : ಪಾಸ್ ಪೋರ್ಟ್ ಸೇವೆಯನ್ನು ಇನ್ನಷ್ಟು ಸುಗಮಗೊಳಿಸಲು ಕೇಂದ್ರ ಸರ್ಕಾರ ಮಂಗಳವಾರ ಪಾಸ್ ಪೋರ್ಟ್ ಸೇವಾ ಆ್ಯಪ್ ಬಿಡುಗಡೆಗೊಳಿಸಿದೆ. ಹೀಗಾಗಿ ಇನ್ಮುಂದೆ ಪಾಸ್ ಪೋರ್ಟ್ ಪಡೆಯುವುದು ಈಗ ಅರ್ಜಿದಾರರಿಗೆ ಇನ್ನಷ್ಟು ಸುಗಮಗೊಳಿಸಿದೆ.

ಪಾಸ್ ಪೋರ್ಟ್ ಸೇವಾ ದಿವಸ್' ಅಂಗವಾಗಿ ಪಾಸ್ ಪೋರ್ಟ್ ಸೇವಾ ಆ್ಯಪ್ ನ್ನು ವಿದೇಶ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಇಂದು ಬಿಡುಗಡೆ ಗೊಳಿಸಿ ಮಾತನಾಡಿದ ಅವರು ಈ ಸೇವಾ ಆ್ಯಪ್ ಮೂಲಕ ಪಾಸ್ ಪೋರ್ಟ್ ಪಡೆಯುವುದು ಇನ್ನಷ್ಟು ಸುಲಭವಾಗಲಿದ್ದು ಇದೊಂದು ಪಾಸ್ ಪೋರ್ಟ್ ಕ್ರಾಂತಿ ಎಂದು ವರ್ಣಿಸಿದರು.
ಅರ್ಜಿದಾರರರು ದೇಶದ ಯಾವುದೇ ಮೂಲೆಯಲ್ಲಿದ್ದರೂ ಪಾಸ್ ಪೋರ್ಟ್ ಸೇವಾ ಆ್ಯಪ್ ಮೂಲಕ ತಮ್ಮ ಮೊಬೈಲ್ ನಲ್ಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆಗಳನ್ನು ಪೂರೈಸಿ ಸುಲಭದಲ್ಲಿ ಪಾಸ್ ಪೋರ್ಟ್ ಪಡೆಯಬಹುದಾಗಿದೆ .ಈಗಿನ ಸರಳೀಕೃತವಾಗಿರುವ ಹೊಸ ಪಾಸ್ ಪೋರ್ಟ್ ನಿಯಮಗಳಿಂದಾಗಿ ಹಜ್ ಯಾತ್ರೆ ಕೈಗೊಳ್ಳುವ ಸಾವಿರಾರು ಭಾರತೀಯ ಪ್ರಜೆಗಳಿಗೆ ಇದರಿಂದ ಅನುಕೂಲವಾಗಲಿದೆ' ಎಂದು ಸಚಿವೆ ಸುಷ್ಮಾ ತಿಳಿಸಿದರು.
ಈ ಸಂದರ್ಭ ಸಭೆಯಲ್ಲಿ ಹಲವು ಪಾಸ್ ಪೋರ್ಟ್ ಸೇವಾ ಕೇಂದ್ರಗಳ ಅಧಿಕಾರಿಗಳು ಮತ್ತು ವಿದೇಶ ವ್ಯವಹಾರಗಳ ಸಚಿವಾಲಯದ ಸದಸ್ಯರು ಉಪಸ್ಥಿತರಿದ್ದರು.