ಮಂಗಳೂರು, ಜ.06 (DaijiworldNews/PY): ನಗರದ ನೂತನ ಕಮಿಷನರ್ ಎನ್.ಶಶಿಕುಮಾರ್ ಅವರು, ಜ.6ರ ಬುಧವಾರದಂದು ಗಾಂಜಾ ಮಾರಾಟಗಾರರು, ಪೆಡ್ಲರ್ ಹಾಗೂ ಗಾಂಜಾ ಸೇವನೆ ಅಪರಾಧಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದು, ಅಕ್ರಮ ಚಟುವಟಿಕೆಗಳಿಂದ ದೂರವಿರಲು ಹೇಳಿದ್ದಾರೆ.













ಕಮಿಷನರೇಟ್ ವ್ಯಾಪ್ತಿಯ ಗಾಂಜಾ ಮಾರಾಟ ಹಾಗೂ ಗಾಂಜಾ ಸೇವನೆಯ ಅಪರಾಧಿಗಳ ಮೆರವಣಿಗೆ ನಡೆಸಿ ಎಚ್ಚರಿಕೆ ನೀಡಿದ ಎನ್.ಶಶಿಕುಮಾರ್ ಅವರು,
"ಮಾದಕ ದ್ರವ್ಯಗಳನ್ನು ಸೇವಿಸುವುದರಿಂದ ದೂರವಿರಿ. ಅಪರಾಧಿಗಳ ಪ್ರಕರಣಗಳ ಸ್ಥಿತಿಯನ್ನು ಅಧ್ಯಯನ ಮಾಡಲು ಹಾಗೂ ಆರೋಪಿಗಳು ನ್ಯಾಯಾಲಯಕ್ಕೆ ನಿಯಮಿತರಾಗಿ ಹಾಜರಾಗುತ್ತಿದ್ದಾರೆಯೇ ಎಂದು ಪರೀಕ್ಷಿಸಲು ಇಲ್ಲಿಗೆ ಕರೆಸಿಕೊಳ್ಳಲಾಗಿದೆ. ನೀವು ಎಲ್ಲಾ ಕಾನೂನುಬಾಹಿರ ಚಟುವಟಿಕೆಗಳನ್ನು ಬಿಟ್ಟು ಜೀವನದಲ್ಲಿ ಬದಲಾವಣೆ ಮಾಡಿಕೊಂಡು ಬದುಕು ಸಾಗಿಸಲು ಮುಂದಾಗಬೇಕು" ಎಂದು ತಿಳಿಸಿದ್ದಾರೆ.
"ನಗರದಲ್ಲಿ ಪೆಡ್ಲರ್ಗಳು ಡ್ರಗ್ಸ್ ಮಾರಾಟ ಮಾಡುತ್ತಿದ್ದಾರೆ. ಡ್ರಗ್ಸ್ ವ್ಯಸನಕ್ಕೆ ತುತ್ತಾದವರನ್ನು ಪತ್ತೆ ಹಚ್ಚಬೇಕು. ಅವರ ಕುಟುಂಬದವರನ್ನು ಸಂಪರ್ಕಿಸಿ ಮಾಹಿತಿಯನ್ನು ಕಲೆ ಹಾಕುವ ಕಾರ್ಯವನ್ನು ಮಾಡಬೇಕು. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ರಮ ಕೈಗೊಳ್ಳಬೇಕು" ಎಂದು ಸೂಚನೆ ನೀಡಿದ್ದಾರೆ.
"ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಡಾರ್ಕ್ ವೆಬ್ ಹಾಗೂ ಕೊರಿಯರ್ಗಳ ಮೂಲಕ ಡ್ರಗ್ಸ್ ಸಂಗ್ರಹಿಸುತ್ತಿದ್ದಾರೆ. ಅಪರಾಧಿಗಳು ಕಾನೂನುಬಾಹಿರ ಚಟುವಟಿಕೆಗಳಿಂದ ದೂರವಿರಬೇಕು. ಒಂದುವೇಳೆ ಅಪರಾಧಿಗಳು ತಮ್ಮ ನಡವಳಿಕೆಯನ್ನು ಬದಲಾಯಿಸಿದರೆ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ತಿಳಿಸಿದ್ದಾರೆ.
ಡ್ರಗ್ ಅಪರಾಧಿಗಳ ಪರೇಡ್ ನಡೆಸಿ ಬಳಿ ಮಾತನಾಡಿದ ಶಶಿಕುಮಾರ್, "ಈ ಪರೇಡ್ನಲ್ಲಿ 140 ಕ್ಕೂ ಹೆಚ್ಚು ಎನ್ಡಿಪಿಎಸ್ ಅಪರಾಧಿಗಳು ಭಾಗವಹಿಸಿದ್ದಾರೆ. ಮಂಗಳೂರು ಕೇರಳ ರಾಜ್ಯದ ಗಡಿಯಾಗಿರುವ ಕಾರಣ ಇಲ್ಲಿ ಸಮುದ್ರ ಮಾರ್ಗವಿದೆ, ಅಲ್ಲದೇ, ನಗರದಲ್ಲಿ ಅನೇಕ ಕಾಲೇಜುಗಳಿವೆ. ಮಾದಕ ವಸ್ತು ಭೀತಿ ಹೆಚ್ಆಗಿದೆ. ಕಮಿಷನರೇಟ್ ವ್ಯಾಪ್ತಿಯಲ್ಲಿ 15 ಪೊಲೀಸ್ ಠಾಣೆಗಳ ಅಡಿಯಲ್ಲಿ ಹಲವಾರು ಸೂಕ್ಷ್ಮ ಸ್ಥಳಗಳನ್ನು ಪೊಲೀಸರು ಗುರುತಿಸಿದ್ದಾರೆ" ಎಂದು ತಿಳಿಸಿದ್ದಾರೆ.
"ಈ ರೀತಿಯಾದ ದುಶ್ಚಟಗಳ ಬಗ್ಗೆ ಮಾಹಿತಿ ಇದ್ದಲ್ಲಿ 112ಕ್ಕೆ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು" ಎಂದು ಹೇಳಿದ್ದಾರೆ.
ಡಿಸಿಪಿ ಹರಿರಾಂ ಶಂಕರ್ ಅವರು ಮಾತನಾಡಿ, "ಡ್ರಗ್ಸ್ ಪ್ರಭಾವದಿಂದ ಅಪರಾಧ ಚಟುವಟಿಕಗೆಳು ಹೆಚ್ಚಿವೆ. ಕರಾವಳಿಯಲ್ಲಿ ಡ್ರಗ್ಸ್ ಬಳಕೆ ಹಾಗೂ ಮಹಿಳೆಯರ ಮೇಲಿನ ಅಪರಾಧಗಳು ಹೆಚ್ಚುತ್ತಿವೆ. ಇತ್ತೀಗೆ ಗಾಂಜಾ ಪ್ರಭಾವದಿಂದ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಲಾಯಿತು" ಎಂದು ತಿಳಿಸಿದ್ದಾರೆ.
"ಡಾರ್ಕ್ ವೆಬ್ ಮೂಲಕ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರ ಮೇಲೂ ಕೂಡಾ ನಿಗಾ ವಹಿಸಲಾಗಿದೆ" ಎಂದರು.
ಈ ಸಂದರ್ಭ ಡಿಸಿಪಿ ವಿನಯ್ ಗಾಂವ್ಕರ್ ಹಾಗೂ ಎಸಿಪಿಗಳು ಸೇರಿದಂತೆ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.