ಸುಳ್ಯ,ಸೆ.04: ಸ್ನಾನಕ್ಕೆಂದು ನದಿಗೆ ಇಳಿದಿದ್ದ ವ್ಯಕ್ತಿಯೊಬ್ಬರು ನೀರುಪಾಲಾಗಿರುವ ಘಟನೆ ಸುಳ್ಯದ ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪೊಳಲಿ ನಿವಾಸಿ ಹರಿಪ್ರಸಾದ್ ನೀರುಪಾಲಾದವರು. ಸವಣೂರು ಸಿ.ಎ. ಬ್ಯಾಂಕ್ ನಿರ್ದೇಶಕ ಚೆನ್ನಪ್ಪ ಗೌಡ ರ ಮನೆಗೆ ಇಂಟರ್ ಲಾಕ್ ಅಳವಡಿಕೆಗೆಂದು ತೆರಳಿದ್ದರು. ಕೆಲಸದ ಬಳಿಕ ಕುಮಾರಧಾರ ನದಿಗೆ ಸ್ನಾನಕ್ಕೆಂದು ತೆರಳಿದ್ದ ಅವರು ನೀರುಪಾಲಾಗಿದ್ದಾರೆ. ಸ್ಥಳೀಯರು ಹಾಗೂ ಅಗ್ನಿ ಶಾಮಕ ದಳ ಸಿಬ್ಬಂದಿಗಳು ಶೋಧ ಕಾರ್ಯ ಮುಂದುವರಿಸಿದ್ದಾರೆ. ಘಟನೆಯ ಕುರಿತಂತೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.