ಮಂಗಳೂರು ಸೆ 27 : ಆದ್ದೂರಿ ಬಜೆಟ್ನ ಸಿನಿಮಾ "ಅಂಬರ್ ಕ್ಯಾಟರರ್ಸ್ " ಧ್ವನಿಸುರುಳಿ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ, ಇದೇ
ಶುಕ್ರವಾರ 29ರಂದು ಸಂಜೆ 4 ಗಂಟೆಗೆ ತೊಕ್ಕೊಟ್ಟು ಅಸೈಗೋಳಿಯಲ್ಲಿ ರುವ ಅಭಯಾಶ್ರಮದಲ್ಲಿ ದ್ವನಿಸುರುಳಿ ಕಾರ್ಯಕ್ರಮ ಆದ್ದೂರಿಯಾಗಿ ನಡೆಯಲಿದೆ. ನಾಗೇಶ್ವರ ಸಿನಿಕಂಬೈನ್ಸ್ನಲ್ಲಿ ತಯಾರಾದ ಚಿತ್ರದಲ್ಲಿ ಸುರೇಶ್ ಎಸ್. ಭಂಡಾರಿ ನಿರ್ಮಾಪಕರಾ ಗಿದ್ದು, ಈ ಸಿನಿಮಾವನ್ನು ಜೈಪ್ರಸಾದ್ ನಿರ್ದೇಶಿಸಿದ್ದಾರೆ. ಸೌರಭ ಭಂಡಾರಿ ಚಿತ್ರದ ನಾಯಕ ನಟರಾಗಿದ್ದು, ಈ ಮೂಲಕ ತುಳು ಸಿನಿಮಾ ರಂಗಕ್ಕೆ ಈ ಮೂಲಕ ಎಂಟ್ರಿ ಪಡೆಯು ತ್ತಿದ್ದಾರೆ. ಸಿಂಧೂ ಲೋಕನಾಥ್ ನಾಯಕಿ, ಕನ್ನಡದ ಭಾರತೀ ವಿಷ್ಣುವರ್ಧನ್ , ಶರತ್ ಲೋಹಿತಾಶ್ವ ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಮುಖ್ಯ ಪಾತ್ರದಲ್ಲಿ ಕುಸೇಲ್ದರಸೆ ನವೀನ್ಡಿ ಪಡೀಲ್, ಅರವಿಂದ ಬೋಳಾರ್, ಭೋಜ ರಾಜ ವಾಮಂಜೂರು ಮೊದಲಾ ದವರ ತಾರಾಗಣವಿದೆ. ಸಂತೋಷ್ ರೈ ಪಾತಾಜೆಯವರ ಛಾಯಾಗ್ರಹಣವಿದೆ.
ಒಂದು ಹಾಡಿಗೆ 17 ಲಕ್ಷ ರೂಪಾಯಿ ಖರ್ಚು
ಕೋಸ್ಟಲ್ವುಡ್ ಅಂಗಳದಲ್ಲಿ ದೊಡ್ಡ ಬಜೆಟ್ ಚಿತ್ರ ಎಂದೇ ಕರೆಯಲಾಗುತ್ತಿರುವ ಅಂಬರ್ ಕೇಟರರ್ಸ್ ಚಿತ್ರದ ಹವಾ ಮತ್ತಷ್ಟೂ ಜೋರಾಗುವ ಸಾಧ್ಯತೆಯಿದೆ. ಚಿತ್ರದ ಕುರಿತು ಈಗಾಗಲೇ ಹುಟ್ಟಿಕೊಂಡ ನಿರೀಕ್ಷೆಯ ಜತೆಯಲ್ಲಿ ಹಾಡುಗಳ ಇಂಪನ್ನು ಸೆ 29ರ ಬಳಿಕ ಸಿನಿ ಪ್ರೀಯರು ಕೇಳಿ ಆನಂದಿಸಬಹುದಾಗಿದೆ. ಖ್ಯಾತ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿಯ ಮಾಂತ್ರಿಕ ಸ್ಪರ್ಶದ ಹಾಡುಗಳು ಪ್ರೇಕ್ಷಕರ, ಕೇಳುಗರ ಕಿವಿಗೆ ಇಂಪು ನೀಡಲಿದೆ ಎನ್ನುವುದು ಚಿತ್ರತಂಡದ ಮಾತು. ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳು ಇದ್ದು ಎಲ್ಲವೂ ಡಿಫರೆಂಟ್ ಮೋಡ್ನಲ್ಲಿ ಪ್ರೇಕ್ಷಕರನ್ನು ಸೆಳೆಯಲಿದೆ ಅನ್ನೋದು ಚಿತ್ರತಂಡ ಅನಿಸಿಕೆ.
ಚಿತ್ರದಲ್ಲಿ ಮದುವೆಯ ಹಾಡಿನ ರೂಪದಲ್ಲಿ ಬರುವ ’ಲಿಂಗೊನಾ ಪುಳ್ಳಿನಾ ಮದಿಮೆದ ಗೌಜಿಯಾ’ ಹಾಡನ್ನು ನಿತಿನ್ ಬಂಗೇರಾ ಚಿಲಿಂಬಿ ಅವರು ಬರೆದಿದ್ದಾರೆ. ವಿಸ್ಮಯ ವಿನಾಯಕ್ ಈ ಹಾಡನ್ನು ಹಾಡಿದ್ದಾರೆ. ನಾಯಕನ ಇಂಟರ್ಡಕ್ಷನ್ ಹಾಡು ರಾಮಧೂತ ಹನುಮಂತವನ್ನು ಬಾಲಿವುಡ್ ಖ್ಯಾತಿಯ ಹಿನ್ನೆಲೆ ಗಾಯಕ ಶಂಕರ್ ಮಹದೇವನ್ ಹಾಡಿದ್ದಾರೆ.ಈ ಒಂದು ಹಾಡಿಗೆ ಸುಮಾರು 17 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಅಂಬರ್ ಕೇಟರರ್ಸ್ ಸಿನಿಮಾ ನಿರ್ದೇಶಕ ಜೈ ಪ್ರಸಾದ್ ಬಜಾಲ್ ಅವರ ಸಾಹಿತ್ಯ ಇರುವ ಪ್ರೇಮಿಗಳ ಹಾಡು ’ಕನಟ್ ಒಂಜಿ ಕನನೇ.. ತೆರಿಪಾಂಡ್ ನಿನಾನೇ’ ಯನ್ನು ಹಿನ್ನೆಲೆ ಗಾಯಕಿ ಅನುರಾಧ ಭಟ್ ಹಾಡಿದ್ದಾರೆ. ಇದರ ಜತೆಯಲ್ಲಿ ಜೈ ಪ್ರಸಾದ್ ಬಜಾಲ್ ಸಾಹಿತ್ಯದ ’ತೂಲೆ ಮೂಲೆ ಆಜಿ ಕಾಜಿ ಪಡ್ಡಿನಾ ಒಂಜಿ ಪೊಣ್ಣನ’ ಐಟಂ ಹಾಡಿಗೆ ಗಾಯಕಿ ಅನುರಾಧ ಭಟ್ ಧ್ವನಿಯಾಗಿದ್ದಾರೆ. ಅಕ್ಟೋಬರ್ನಲ್ಲಿ ಚಿತ್ರ ತೆರೆಗೆ ಬರೋ ನಿರೀಕ್ಷೆ ಇದೆ.