ಕಾಸರಗೋಡು, ಜ 07 (DaijiworldNews/SM): ಅಡಿಕೆ ಸುಳಿಯುವ ಮೆಟ್ಟು ಕತ್ತಿ ಮೇಲೆ ಕುಸಿದು ಬಿದ್ದು ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಕೊಡೋ ಬೇಳೂರು ಎಂಬಲ್ಲಿ ನಡೆದಿದೆ.

ಮೃತಪಟ್ಟವರನ್ನು ಕೋಡೋ ಬೇಳೂರಿನ ಬಿಜು(28) ಎಂದು ಗುರುತಿಸಲಾಗಿದೆ. ಮನೆಯಂಗಳದಲ್ಲಿ ಅಡಿಕೆ ಸುಳಿಯುತ್ತಿದ್ದಾಗ ಕುಸಿದು ಮೆಟ್ಟುಕತ್ತಿ ಮೇಲೆ ಅವರು ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಹೊಟ್ಟೆಗೆ ಗಂಭೀರ ಗಾಯವಾಗಿದೆ.
ತಕ್ಷಣ ಬಿಜುರವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟರು.