ಮಂಗಳೂರು, ಜ.09 (DaijiworldNews/PY): ಮಂಗಳೂರಿಗೆ ನೂತನ ಕಮಿಷನರ್ ಬಂದ ಬಳಿಕ ಒಂದಲ್ಲಾ ಒಂದು ಕಾರ್ಯದಲ್ಲಿ ಸುದ್ದಿಯಲ್ಲಿದ್ದಾರೆ.

ರಾತ್ರಿ ವೇಳೆ ಸಾರ್ವಜನಿಕರಿಗೆ ತೊಂದರೆ ಕೊಡುವವರು, ಗಾಂಜಾ ಪೆಡ್ಲರ್ಗಳನ್ನು ಮಟ್ಟ ಹಾಕಲು ಮುಂದಾಗಿದ್ದು, ನಿರಂತರವಾದ ಕಾರ್ಯಚರಣೆ ನಡೆಸುತ್ತಿದ್ದಾರೆ. ಸುಮಾರು ನೂರಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡಿದ್ದಾರೆ. ಇದರೊಂದಿಗೆ ಕಮಿಷನರ್ ಕಾರ್ಯವೊಂದರಲ್ಲಿ ಭಕ್ತಿ ಪರವಶರಾಗಿ ಭಕ್ತಿಗೀತೆ ಹಾಡಿ ಎಲ್ಲರ ಗಮನವನ್ನು ಸೆಳೆದಿದ್ದಾರೆ.
ಕಮಿಷನರ್ ಶಶಿಕುಮಾರ್ ಅವರು ನಗರದ ಪಾಂಡೇಶ್ವರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಕ್ತಿಗೀತೆ ಹಾಡಿದ್ದು, ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಂಡಿರುವ ಪೊಲೀಸ್ ಕಮಿಷನರ್ ಭಕ್ತಿ ಗೀತೆ ಮೂಲಕ ಭಕ್ತರನ್ನು ಫಿದಾಗೊಳಿಸಿದ್ದಾರೆ.
ಈ ಹಿಂದೆ ನಗರದಲ್ಲಿ ಎರಡು ದಿನಗಳ ಕಾಲ ಬೀಚ್, ಮೈದಾನ ಸಾರ್ವಜನಿಕ ಸ್ಥಳದಲ್ಲಿ ಮಧ್ಯಪಾನ ಮಾಡುತ್ತಿರುವವರು, ಅನಾಮಿಕರ ವಿರುದ್ದ ಕಾರ್ಯಚರಣೆ ನಡೆಸಿದ್ದು, ಇವರ ಕಾರ್ಯಚರಣೆಗೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.