ಉಡುಪಿ, ಸೆ 27: ಪ್ರವಾಸೋಧ್ಯಮ ದಿನಾಚರಣೆಯ ಪೂರ್ವಭಾವಿಯಾಗಿ ಬಾರ್ಕೂರಿನ ಕತ್ತಲೆ ಬಸದಿಯಲ್ಲಿ ಮಂಗಳವಾರ ವಿಶೇಷ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಪರ ಜಿಲ್ಲಾಧಿಕಾರಿ ಅನುರಾಧ ಉಡುಪಿ ಜಿಲ್ಲೆಯಲ್ಲಿ ವಿಫುಲ ಅವಕಾಶಗಳಿದ್ದು, ಅವುಗಳ ಅಭಿವೃದ್ದಿಗಾಗಿ ಸರಕಾರದೊಂದಿಗೆ ಖಾಸಗಿ ಸಹಭಾಗಿತ್ವವೂ ಅಗತ್ಯವಿದೆ ಎಂದರು. ಇನ್ನು ಬಾರ್ಕೂರಿನ ಕತ್ತಲೆ ಬಸದಿಯ ನೈಜ ದರ್ಶನವಾಗಿದೆ, ಅತಿ ಶೀಘ್ರದಲ್ಲಿ ಇದಕ್ಕೆ ಕಾಯಕಲ್ಪ್ಪ ಒದಗಿಸಲು ಇಲಾಖೆ ಕ್ರಮ ತೆಗೆದುಕೊಳ್ಳಲಿದೆ. ಕೇವಲ ಬಾರ್ಕೂರು ಮಾತ್ರವಲ್ಲ, ಉಡುಪಿ ಜಿಲ್ಲೆಯ ಇತರ ಪಾರಂಪರಿಕ ತಾಣಗಳನ್ನು ಪ್ರವಾಸಿ ಕೇಂದ್ರಗಳನ್ನಾಗಿ ಮಾರ್ಪಡಿಸಲು ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.