ಕಾಸರಗೋಡು, ಜ.10 (DaijiworldNews/PY): ರಾಷ್ಟ್ರೀಯ ಮಟ್ಟದ ಕ್ರೀಡಾಪಟು ಆರ್ಯಾಶ್ರೀಗೆ ರಾಜ್ಯ ಸರ್ಕಾರದ ವತಿಯಿಂದ ನಿರ್ಮಿಸಲಾದ ಮನೆಯನ್ನು ಕ್ರೀಡಾ ಸಚಿವ ಇ.ಪಿ ಜಯರಾಜನ್ ಹಸ್ತಾ೦ತರಿಸಿದರು.







ಬಂಗಳಂ ಕೊಳಕ್ಕಾಡ್ ಎಂಬಲ್ಲಿ ಮನೆ ನಿರ್ಮಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, "ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ಸರಕಾರಿ ಹುದ್ದೆ ನೀಡಲಾಗುತ್ತಿದ್ದು, ಈಗಾಗಲೇ 552 ಮಂದಿಗೆ ನೇಮಕಾತಿ ನೀಡಲಾಗಿದೆ. ಇದಲ್ಲದೆ ಸೂಕ್ತ ಮನೆ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದ ಆರ್ಯಾಶ್ರೀಗೆ ಮನೆಯನ್ನು ಒದಗಿಸಲಾಗಿದೆ" ಎಂದು ಹೇಳಿದರು.
ನೀಲೇಶ್ವರ ನಗರಸಭೆ ಅಧ್ಯಕ್ಷೆ ಟಿ.ವಿ.ಶಾಂತಾ ಅಧ್ಯಕ್ಷತೆ ವಹಿಸಿದ್ದರು.