ಮಂಗಳೂರು, ಜೂ 28: ಬೇಕರಿ ಅಂಗಡಿಯೊಂದು ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದಾಗಿ ಬೆಂಕಿ ಹತ್ತಿಕೊಂಡು ಸುಟ್ಟು ಕರಕಲಾದ ಘಟನೆ ನಗರದ ಪದವಿನಂಗಡಿಯಲ್ಲಿ ಜೂ 28 ರ ಗುರುವಾರ ಸಂಭವಿಸಿದೆ. 'ಗಲ್ಪ್ ಜನರಲ್ ಸ್ಟೋರ್ ' ಹೆಸರಿನ ಅಂಗಡಿಯೊಳಗಿದ್ದ ಬೇಕರಿ ತಿನಿಸುಗಳು ದಿನಸಿ ಸಾಮಗ್ರಿಗಳು, ಶೋಕೇಸ್ ಹಾಗೂ ಇತರ ಸೊತ್ತುಗಳು ಘಟನೆಯಿಂದಾಗಿ ಬೆಂಕಿಗಾಹುತಿಯಾಗಿದೆ. ಘಟನೆಯಿಂದ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.