ಕಾಸರಗೋಡು ಜೂ 28: ದುಬೈಗೆ ಹೋಗಿದ್ದ ಕಾಸರಗೋಡಿನ ಎರಡು ಕುಟುಂಬಗಳಿಗೆ ಸೇರಿದ ಆರು ಮಕ್ಕಳು ಸೇರಿದಂತೆ ೧೦ ಮಂದಿ ನಿಗೂಢವಾಗಿ ನಾಪತ್ತೆಯಾದ ಹಿನ್ನಲೆಯಲ್ಲಿ , ಇವರ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ , ಕೇಂದ್ರ ಗುಪ್ತಚರ ಇಲಾಖೆಗಳು ಮಾಹಿತಿ ಕಲೆ ಹಾಕುತ್ತಿದೆ. ಇದರ ಬೆನ್ನಲ್ಲೇ ಮತ್ತೆ ನಾಲ್ವರು ನಿಗೂಢವಾಗಿ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರಕಿದೆ ಎನ್ನಲಾಗಿದೆ. ನಾಪತ್ತೆಯಾದವರು ಚೆರ್ವತ್ತೂರು ಮತ್ತು ಪಯಂಗಡಿಯವರು ಎನ್ನುವ ಪ್ರಾಥಮಿಕ ಮಾಹಿತಿ ಲಭ್ಯವಾಗಿದ್ದು ಇದರಿಂಂದಾಗಿ ನಾಪತ್ತೆಯಾದವರ ಸಂಖ್ಯೆ 15 ಕ್ಕೆ ಏರಿಕೆಯಾದಂತಾಗಿದೆ.
ಕಾಸರಗೋಡು ಸಮೀಪದ ಚಂದ್ರಗಿರಿ ಸೇತುವೆಯ ಬಳಿಯ ಚೆಮ್ನಾಡುನ ಮುಂಡಾಂಕುಳದ ಕುನ್ನಿಲ್ ಹೌಸ್ನ ಎ. ಅಬ್ದುಲ್ ಹಮೀದ್ ಎಂಬವರು ಈ ಹಿಂದೆ ಕಾಣೆಯಾದವರ ಬಗ್ಗೆ ದೂರು ದಾಖಲಿಸಿದ್ದರು. ದೂರುದಾರ ಅಬ್ದುಲ್ ಹಮೀದ್ರ ಪುತ್ರಿ ನಸೀರಾ(25), ಆಕೆಯ ಪತಿ ಮೊಗ್ರಾಲ್ನ ಸವಾದ್(35), ದಂಪತಿಯ ಮಕ್ಕಳಾದ ಮುಸ್ಬಾ(6), ಮರ್ಜಾನ(3), ಮುಖಾಬಿಲ್(11ತಿಂಗಳು) ಮತ್ತು ಸವಾದ್ರ ದ್ವಿತೀಯ ಪತ್ನಿ ಮೂಲತಃ ಪಾಲ್ಘಾಟ್ ನಿವಾಸಿ ರೆಹಮ್ಮಾತ್ (25) ಎಂಬವರು ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿತ್ತು.
ಇದರ ಜತೆಗೆ ಅಣಂಗೂರು ಕೊಲ್ಲಂಪಾಡಿ ನಿವಾಸಿಗಳಾದ ಅನ್ವರ್ ಕೊಲ್ಲಂಪಾ ಡಿ, ಅವರ ಪತ್ನಿ 3 ತಿಂಗಳ ಗರ್ಭಿಣಿ ಝೀನತ್, ಇವರ ಇಬ್ಬರು ಮಕ್ಕಳು ದುಬಾಯಲ್ಲಿ ನಾಪತ್ತೆಯಾಗಿರುವುದಾಗಿ ಮಾಹಿತಿ ಲಭಿಸಿತ್ತು.
ದೂರು ನೀಡಿದ್ದು ಆದರೆ ಇದೀಗ ಮತ್ತೆ ನಾಲ್ವರು ಕಾಣೆಯಾಗಿರುವ ಬಗ್ಗೆ ಮಾಹಿತಿ ದೊರಕಿದ್ದು ಇದು ಪೊಲೀಸ್ ಇಲಾಖೆಯನ್ನೇ ಬೆಚ್ಚಿ ಬೀಳಿಸಿದೆ. ನಾಪತ್ತೆಯಾದರ ಪೈಕಿ ಸವಾದ್ ಗೆ ದುಬೈ ಯಲ್ಲಿ ಮೊಬೈಲ್ ಫೋನ್ ಅಂಗಡಿ ಮತ್ತು ಸುಗಂಧ ದ್ರವ್ಯ ಮಾರಾಟದಂಗಡಿ ನಡೆಸುತ್ತಿದ್ದುರು. ಇವರರು ನಿರಂತರವಾಗಿ ಮನೆಯವರೊಡನೆ ಸಂಪರ್ಕದಲ್ಲಿ ಇದ್ದರು. ಅವರನ್ನು ಕಾಣಲೆಂದು ಪತ್ನಿ ಮತ್ತು ಮಕ್ಕಳು ಇತ್ತೀಚೆಗಷ್ಟೇ ದುಬೈಗೆ ತೆರಳಿದ್ದರು. ಆದರೆ ಇದೇ 15ರ ಬಳಿಕ ಇವರ ಸಂಪರ್ಕ ಕಡಿದು ಹೋಗಿತ್ತು ಎನ್ನಲಾಗಿದೆ.
ಈ ನಡುವೆ ಸವಾದ್ ತನ್ನ ಗೆಳೆಯ ಮೊಗ್ರಾಲ್ ನ ಯುವಕನಿಗೆ ಬುಧವಾರ ಸಂದೇಶವನ್ನು ರವಾನಿಸಿದ್ದು, ತಾನು ಹಾಗೂ ತನ್ನ ಕುಟುಂಬದ ಸದಸ್ಯರು ಯೆಮನ್ ದೇಶದ ಹಲರ್ ಮೌತ್ ನಲ್ಲಿ , ಶೇಕ್ ಅಬು ಬಿಲಾಲ್ ಅಬ್ದುಲ್ಲಾ ಎಂಬವರ ಬಳಿ ಮತ ಅಧ್ಯಯನ ನಡೆಸುತ್ತಿದ್ದಾರೆ ಎಂದು ಮೇಸೇಜ್ ನಲ್ಲಿ ತಿಳಿಸಿದ್ದಾರೆ.