ಮಂಗಳೂರು, ಜ.10 (DaijiworldNews/HR): ಭಾನುವಾರದಂದು ಸಸಿಹಿತ್ಲು ಬಳಿಯ ಮುಂಡ ಬೀಚ್ನಲ್ಲಿ ಎಂಟು ಜನರ ಗುಂಪು ಕೊಚ್ಚಿ ಹೋಗಿ ಓರ್ವ ವ್ಯಕ್ತಿ ಸಾವನ್ನಪ್ಪಿ ಇನ್ನೊಬ್ಬರು ನಾಪತ್ತೆಯಾದ ಘಟನೆ ನಡೆದಿದೆ.


ಮೃತರನ್ನು ಸುಂದರ್ (45) ಎಂದು ಗುರುತಿಸಲಾಗಿದ್ದು, ನಾಪತ್ತೆಯಾದ ವ್ಯಕ್ತಿಯನ್ನು ದಾಮೋದರ್ (55) ಎಂದು ಗುರುತಿಸಲಾಗಿದೆ.
ಸೀಮಂತ ಕಾರ್ಯಕ್ರಮಕ್ಕೆಂದು ಬಂದ ನಾಲ್ಕು ಪುರುಷರು ಮತ್ತು ನಾಲ್ಕು ಮಹಿಳೆಯರು ಸೇರಿದಂತೆ ಒಟ್ಟು ಎಂಟು ಜನರು ತೋಕೂರಿಗೆ ಬಂದಿತ್ತು ಅಲ್ಲಿಂದ ಸಂಜೆ ವೇಳೆಗೆ ಬೀಚ್ಗೆ ಬಂದಿದ್ದರು.
ಸ್ಥಳೀಯ ಮೀನುಗಾರರು ಸಮುದ್ರಕ್ಕೆ ಹೋಗದಂತೆ ಎಚ್ಚರಿಕೆ ನೀಡಿದ್ದರೂ ಕೂಡ ಅದನ್ನು ನಿರ್ಲಕ್ಷಿಸಿ ನೀರಿಗೆ ಇಳಿದಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.
ನೀರಿನಲ್ಲಿ ಆಡುವಾಗ ನೀರಿನ ಸೆಳೆತ ಜೋರಾಗಿದ್ದ ಪರಿಣಾಮ ಎಲ್ಲರು ನೀರುಪಾಲಾಗಿದ್ದರು, ಬಳಿಕ ಅವರ ರಕ್ಷಣೆಗೆ ಸ್ಥಳೀಯರು ಧಾವಿಸಿ, ಅವರಲ್ಲಿ ಆರು ಮಂದಿಯನ್ನು ತೀರಕ್ಕೆ ಕರೆತರುವಲ್ಲಿ ಯಶಸ್ವಿಯಾದರು. ಆದರೆ, ಸುಂದರ್ ಅವರ ಜೀವ ಉಳಿಸಲಾಗಲಿಲ್ಲ.
ದಾಮೋದರ್ ಪತ್ತೆಗಾಗಿ ಹುಡುಕಾಟ ನಡೆಯುತ್ತಿದ್ದು, ರಕ್ಷಿಸಿದ ವ್ಯಕ್ತಿಗಳ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಈ ಕುರಿತು ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.