ಬೈಂದೂರು, ಜ.11 (DaijiworldNews/PY): ಬೈಂದೂರು ತಾಲೂಕು ಯಡ್ತರೆ ರಾಹುತಾನ ಕಟ್ಟೆ ಬಳಿ ಇನ್ನೋವಾ ಕಾರು ದನಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಮೂರು ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.



ಗಾಯಳುಗಳನ್ನು ಅಂಜಾರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾರಿನಲ್ಲಿ ಬೇರೆ ರಿಜಿಸ್ಟ್ರೇಷನ್ ಇರುವ 3-4 ನಂಬರ್ ಪ್ಲೇಟ್ ಇದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಪೊಲೀಸರ ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.