ಮಂಗಳೂರು, ಜ.11 (DaijiworldNews/HR): ಸರಣಿ ಕಳ್ಳತನಗಳಲ್ಲಿ ಭಾಗಿಯಾಗಿದ್ದಾನೆಂಬ ಆರೋಪದ ಮೇಲೆ ಸುರತ್ಕಲ್ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಬಂಧಿತನನ್ನು ಮೂಲತಃ ಧಾರವಾಡ ನಿವಾಸಿಯಾದ ಪ್ರಸ್ತುತ ಉಡುಪಿ ಇಂದ್ರಾಳಿ ದುರ್ಗಾನಗರದಲ್ಲಿ ವಾಸಿಸುತ್ತಿರುವ ರಾಜೇಶ್ ನಾಯ್ಕ(42) ಎಂದು ಗುರುತಿಸಲಾಗಿದೆ.
ಕುಳಾಯಿ ಗ್ರಾಮದ ರವಿಶೆಟ್ಟಿ, ಈಡ್ಯಾ ಗ್ರಾಮದ ಗುಡ್ಡೆ ಕೊಪ್ಪಳ ರಾಮಂಜನೇಯ ಭಜನಾ ಮಂದಿರ, ಕಾರು ಮನೆ ದೈವಸ್ಥಾನ ಮತ್ತು ಸತೀಶ್ ಸುವರ್ಣ ಅವರ ಕುಟುಂಬಕ್ಕೆ ಸೇರಿದ ದೈವಸ್ಥಾನದಿಂದ ರಾಜೇಶ್ ನಾಯ್ಕ ಕಳ್ಳತನ ಮಾಡಿದ್ದಾನೆ.
ಬಂಧಿತನಿಂದ 47 ಗ್ರಾಂ ಚಿನ್ನ ,16 ಕೆಜಿ ತೂಕದ ಬೆಳ್ಳಿ ವಸ್ತುಗಳನ್ನು ಒಳಗೊಂಡಂತೆ 13.53 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಸುರತ್ಕಲ್ ಪೊಲೀಸ್ ಇನ್ಸ್ಪೆಕ್ಟರ್ ಚಂದ್ರಪ್ಪ ಕೆ ಅವರ ಸೂಚನೆಯ ಮೇರೆಗೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಚಂದ್ರಶೇಖರಯ್ಯ ನೇತೃತ್ವ ವಹಿಸಿದ್ದರು.