ಉಡುಪಿ, ಜ.11 (DaijiworldNews/PY): ಜಿಲ್ಲಾ ಯೂತ್ ಕಾಂಗ್ರೆಸ್ನಲ್ಲಿ ಈಗ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯ ಇನ್ನೇನು ಒಂದೇ ದಿನ ಬಾಕಿ ಇದೆ. ಸಾಮಾಜಿಕ ಜಾಲತಾಣದಲ್ಲಿ ಪ್ರಚಾರವೂ ಜೋರಾಗಿದೆ.

ಈ ಬಾರಿಯ ಉಡುಪಿ ಜಿಲ್ಲಾ ಯೂತ್ ಕಾಂಗ್ರೆಸ್ನ ಅಧ್ಯಕ್ಷ ಸ್ಥಾನದ ಚುನಾವಣೆಗೆ ಹಾಲಿ ಅಧ್ಯಕ್ಷರೂ ಸೇರಿದಂತೆ ಹಲವಾರು ಯುವಕರು ಕೂಡ ಅಧ್ಯಕ್ಷಗಿರಿಗೆ ತಮ್ಮ ಉಮೇದುವಾರಿಕೆ ತೋರಿಸಿದ್ದಾರೆ. ಅಲ್ಲದೆ ಈ ಚುನಾವಣೆ ಹಲವಾರು ದೃಷ್ಟಿಕೋನದಿಂದ ಎಲ್ಲರಲ್ಲಿ ಸಾಕಷ್ಟು ಕುತೂಹಲ ಕೂಡ ಮೂಡಿಸಿದೆ.
ಐವೈಸಿ ಆಪ್ ಮೂಲಕ ಜ.12ರಂದು ಆನ್ಲೈನ್ನಲ್ಲಿ ಚುನಾವಣೆ ನಡೆಯಲಿದ್ದು, ಬೆಳಿಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಈ ಮತದಾನ ಪ್ರಕ್ರಿಯೆಯಲ್ಲಿ ಜಿಲ್ಲೆಯ 3,556 ಮತದಾರರಿದ್ದಾರೆ.
ಆಕಾಂಕ್ಷಿಗಳ ಪಟ್ಟಿಯಲ್ಲಿ ಮುಂಚೂಣಿ ಯಲ್ಲಿರುವ ಈಗಾಗಲೇ ಯುವ ಕಾಂಗ್ರೆಸ್ನಲ್ಲಿ ಯುವಕರನ್ನು ಸಕ್ರಿಯಗೊಳಿಸಿ ತಾವೂ ಪಕ್ಷದ ಚಟುವಟಿಕೆಗಳನ್ನ ಲವಲವಿಕೆಯಿಂದ ಸಂಘಟಿಸುತ್ತಿರುವ ಹಾಲಿ ಅಧ್ಯಕ್ಷ ವಿಶ್ವಾಸ್ ಅಮೀನ್ ಅವರು. ಈಗಾಗಲೇ ಕಾರ್ಕಳ ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ದೀಪಕ್ ಕೋಟ್ಯಾನ್, ಜಿಲ್ಲಾ ಸಾಮಾಜಿಕ ಜಾಲತಾಣದ ಪ್ರದೀಪ್ ಶೆಟ್ಟಿ ನಲ್ಲೂರ್, ಕಾರ್ಕಳ ಬ್ಲಾಕ್ ಯೂತ್ ಕಾಂಗ್ರೆಸ್ನ ಉಪಾಧ್ಯಕ್ಷ ಕೃಷ್ಣ ಶೆಟ್ಟಿ ಹಾಗೂ ಕುಂದಾಪುರದ ತೆಕ್ಕಟ್ಟೆಯ ಮಹಮ್ಮದ್ ಸಲಾಮ್ ಅವರುಗಳ ಹೆಸರೂ ಕೂಡ ಪಟ್ಟಿಯಲ್ಲಿವೆ.
ಕಾರ್ಕಳ ಕ್ಷೇತ್ರದಿಂದಲೇ ಇಬ್ಬರು ಅದ್ಯಕ್ಷ ಸ್ಥಾನಕ್ಕೆ ಪೈಪೋಟಿ ಇಳಿದಿರುವುದು ವಿಶೇಷವಾಗಿದೆ.
ಈ ಆಕಾಂಕ್ಷಿಗಳಲ್ಲಿ ಕೆಲವರಿಗೆ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದರೆ, ಇನ್ನು ಕೆಲವರು ಜಿಲ್ಲಾ ಮಟ್ಟದಲ್ಲಿ ಬ್ಲಾಕ್ ಮಟ್ಟದಲ್ಲಿ ಪಕ್ಷದ ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ಭಾಗವಹಿಸಿ ಗುರುತಿಸಿಕೊಂಡಿಸಿದ್ದಾರೆ.
ಹಾಲಿ ಅಧ್ಯಕ್ಷ ವಿಶ್ವಾಸ್ ಅಧ್ಯಕ್ಷ ಗಿರಿಗೆ ಪುನರಾಯ್ಕೆ ಬಯಸಿರುವುದು ಪಕ್ಷದ ಹಿರಿಯ ನಾಯಕರಿಗೂ ಸ್ವಲ್ಪ ಅಚ್ಚರಿ ಉಂಟು ಮಾಡಿದೆ. ಇನ್ನು ಕೆಲವು ಕಾಂಗ್ರೆಸ್ ನಾಯಕರು ಈ ಆಕಾಂಕ್ಷೆಗಳ ಪರವಾದ ಪ್ರಚಾರದಿಂದ ದೂರವೇ ಉಳಿದಂತಿದೆ.
ವಿಶ್ವಾಸ್ ಅಮೀನ್ ಅವರು ಕೊರೊನಾ ಸಂಕಷ್ಟ ಸಂದರ್ಭದಲ್ಲಿ ಬಡವರಿಗೆ ಆಹಾರ ಕೊಟ್ಟು ರೋಗಿಗಳಿಗೆ ಸಹಾಯ ಹಸ್ತ ಚಾಚಿದ್ದು, ತಮ್ಮ ಸಮಾಜ ಸೇವೆಯಿಂದ ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದಾರೆ. ಯುವಕರಿಗೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಪ್ರೋತ್ಸಾಹ ನೀಡುತ್ತಿದ್ದಾರೆ.
ಅಷ್ಟೇ ಅಲ್ಲದೇ ಆಡಳಿತ ಪಕ್ಷದ ಜನ ವಿರೋಧಿ, ರೈತ ವಿರೋಧಿ ಯೋಜನೆಗಳನ್ನು ಖಂಡಿಸಿ ತಮ್ಮ ಮುಂದಾಳತ್ವದಿಂದ ಪ್ರತಿಭಟನೆಯನ್ನು ನಡೆಸಿದ್ದಾರೆ. ಅಷ್ಟೇ ಅಲ್ಲದೆ ಬಿಜೆಪಿ ನಾಯಕರ ಸಿಮೆಂಟ್ ಹಗರಣ, ಆಕ್ರಮ ಮರಳು ದಾಸ್ತಾನು ಮತ್ತು ಸಾಗಾಣಿಕೆ, ಆಕ್ರಮ ಮರದ ದಿಮ್ಮಿ ಸಾಗಾಟ, ತೈಲ, ಗ್ಯಾಸ್ ಬೆಲೆ ಏರಿಕೆ ಇದರ ವಿರುದ್ಧ ದ್ವನಿ ಎತ್ತಿದ್ದಾರೆ. ಆಕ್ರಮ ಮರಳು ಸಂಗ್ರಹ ದಲ್ಲಿ ದಾಖಲೆಗಳನ್ನು ಸಂಗ್ರಹಿಸಿ ಸರಕಾರಕ್ಕೆ ಜಿಲ್ಲಾಡಳಿತಕ್ಕೆ ಕೆಚ್ಚೆದೆಯಿಂದ ಸವಾಲು ಹಾಕಿದ್ದಾರೆ. ತಮ್ಮದೇ ಒಂದು ಯುವ ತಂಡಕಟ್ಟಿಕೊಂಡು ಜಿಲ್ಲೆಯ ಯುವಕರನ್ನು ಸದಾ ಪ್ರೋತ್ಸಾಹಿಸುತ್ತಿದ್ದಾರೆ.
ಇನ್ನು ಕಾರ್ಕಳ ಬ್ಲಾಕ್ ಯೂತ್ ಕಾಂಗ್ರೆಸ್ನ ಉಪಾಧ್ಯಕ್ಷ ಕೃಷ್ಣ ಶೆಟ್ಟಿ ಅವರು ತಮ್ಮ ಕಾಲೇಜು ಶಿಕ್ಷಣ ಸಮಯದಲ್ಲಿ ಎನ್ಎಸ್ಯುಐ ಘಟಕದ ಮುಖಾಂತರ ನಂತರ ಯುವ ಕಾಂಗ್ರೆಸ್ ಕಳೆದ 4-5 ವರ್ಷದಿಂದ ತಮ್ಮ ಬ್ಲಾಕ್ ಮಟ್ಟದಲ್ಲಿ ಮುಂಚೂಣಿಯಲ್ಲಿದ್ದಾರೆ. ಬಿಜೆಪಿಯ ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆ ವಿರೋಧಿಸಿ, ಪ್ರತಿಭಟನೆಯಲ್ಲಿ ಸಕ್ರಿಯರಾಗಿದ್ದು, ಯುವ ಕಾಂಗ್ರೆಸ್ ಸಂಘಟನೆ ಮಾಡುವಲ್ಲಿ ಪ್ರಮುಖರಾಗಿದ್ದಾರೆ. ಪದವಿ ಶಿಕ್ಷಣ ಮುಗಿಸಿದ ಇವರು ಆಕಾಂಕ್ಷಿಗಳ ಪಟ್ಟಿಯಲ್ಲಿ ನೋಂದಣಿ ಮಾಡಿಸಿದ್ದಾರೆ.
ಈ ಕಾರ್ಕಳ ಬ್ಲಾಕ್ ಯೂತ್ ಕಾಂಗ್ರೆಸ್ನ ಅಧ್ಯಕ್ಷರಾಗಿರುವ ದೀಪಕ್ ಕೋಟ್ಯಾನ್ ಅವರು ಸಮಾಜಮುಖಿ ಕಾರ್ಯಗಳಲ್ಲಿ, ಪಕ್ಷ ಸಂಘಟನೆಯಲ್ಲಿ ತನ್ನನ್ನು ತಾನು ಮಂಚೂಣಿಯಲ್ಲಿ ತೊಡಗಿಸಿಕೊಡಿದ್ದಾರೆ. ಅಲ್ಲದೆ ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅತ್ಯಧಿಕ ಮತಗಳನ್ನು ಪಡೆದು ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಇನ್ನಾ ಗ್ರಾಮ ಪಂಚಾಯತ್ ಕಾಂಗ್ರೆಸ್ ಬೆಂಬಲಿತ ಪಂಚಾಯತ್ ಆಡಳಿತ ಚುಕ್ಕಾಣಿ ಹಿಡಿಯುವಂತೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಮತ್ತೋರ್ವ ಜಿಲ್ಲಾ ಕಾಂಗ್ರೆಸ್ನ ಸಾಮಾಜಿಕ ಜಾಲತಾಣದ ಕಾರ್ಯನಿರ್ವಹಣೆಯಲ್ಲಿ ಸಕ್ರೀಯರಾಗಿರುವ ಪ್ರದೀಪ್ ಶೆಟ್ಟಿ ನಲ್ಲೂರು ಅವರೂ ಸಾಮಾಜಿಕ ಜಾಲತಾಣದ ಮೂಲಕ ಯುವಕರನ್ನು ಒಗ್ಗೂಡಿಸಿ ಪಕ್ಷಕ್ಕೆ ಬಲ ತುಂಬುವ ಹಾಗೂ ಪಕ್ಷ ದ ಕಾರ್ಯಗಳನ್ನು ಪ್ರಚುರಪಡಿಸಿ ಜನರಿಗೆ ತಲುಪಿಸುವಲ್ಲಿ ಸಕ್ರಿಯರಾಗಿ ಕೆಲಸ ಮಾಡುತ್ತಿದ್ದಾರೆ.
ಇನ್ನು ತೆಕ್ಕಟ್ಟೆಯ ಮಹಮ್ಮದ್ ಸಲಾಮ್ ಕೂಡ ಜಿಲ್ಲಾ ಯೂತ್ ಕಾಂಗ್ರೆಸ್ನ ಅಧ್ಯಕ್ಷ ಸ್ಥಾನಕ್ಕೆ ಮುಂದೆ ಬಂದಿದ್ದಾರೆ. ಬ್ಲಾಕ್ ಮಟ್ಟದಲ್ಲಿ ಪಕ್ಷದ ಚಟುವಟಿಕೆಯಲ್ಲಿ ಭಾಗವಹಿಸಿಕೊಂಡು ಗುರುತಿಸಿಕೊಂಡಿದ್ದಾರೆ.
ಒಟ್ಟಾರೆಯಾಗಿ ಕಾಂಗ್ರೆಸ್ನ ಹಿರಿಯ ಮತ್ತು ಕಿರಿಯ ನಾಯಕರನ್ನು ಒಗ್ಗೂಡಿಸಿ ಆತ್ಮವಿಶ್ವಾಸಕ್ಕೆ ತೆಗೆದು ಕೊಂಡು ಪಕ್ಷ ಸಂಘಟಿಸುವ ನಾಯಕತ್ವ ಗುಣ ಯಾರಲ್ಲಿದೆ, ಯಾರು ಅಧ್ಯಕ್ಷಗಿರಿಗೆ ಆಯ್ಕೆ ಆಗಬಹುದು. ಹಿರಿಯ ಕಾಂಗ್ರೆಸ್ ನಾಯಕರ ಬೆಂಬಲಿಗರು ಗೆಲ್ಲುತ್ತಾರಾ ಅಥವಾ ಪಕ್ಷ ಹಾಗೂ ಸಮಾಜ ಸೇವೆಯಲ್ಲಿ ತೊಡಗಿ ಕೊಂಡವರಿಗೋ? ಅಥವಾ ಹೊಸ ಮುಖಗಳಿಗೆ ಪಕ್ಷ ಮಣೆ ಹಾಕುತ್ತೋ ಕಾದು ನೋಡಬೇಕಾಗಿದೆ. ಒಟ್ಟಿನಲ್ಲಿ ಯುವ ಕಾಂಗ್ರೆಸ್ ನ ಅಧ್ಯಕ್ಷ ಪಟ್ಟಕ್ಕೆ ಕೌಂಟ್ ಡೌನ್ ಶುರುವಾಗಿದೆ.